ಅಬಕಾರಿ ಅಧಿಕಾರಿಗಳ ದಾಳಿ: ಮದ್ಯ ವಶ
ತುಮಕೂರು: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ತುಮಕೂರು ಜಿಲ್ಲೆಯ ಕರ್ನಾಟಕ- ಆಂಧ್ರಪ್ರದೇಶದ ಗಡಿ ಭಾಗಗಳಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ಈ ಕೆಳಕಂಡಂತೆ ದಾಳಿ ನಡೆಸಿ, ಅಕ್ರಮ ಮದ್ಯ ವಶಪಡಿಸಿಕೊಂಡಿದ್ದಾರೆ.
ಚುನಾವಣೆ ಸಂಬಂಧ ನಕಲಿ ಮದ್ಯ, ಕಳ್ಳಭಟ್ಟಿ ಮತ್ತು ಸೇಂದಿ ರವಾನೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪೆನಗೊಂಡ ಅಬಕಾರಿ ಅಧಿಕಾರಿಗಳಿಗೆ ಜಂಟಿ ದಾಳಿ ನಡೆಸಲು ಸಹಕಾರ ಕೋರಲಾಗಿದ್ದು, ಅದರಂತೆ ಆಂಧ್ರಪ್ರದೇಶ ಮತ್ತು ಕರ್ನಾಟಕ ಅಬಕಾರಿ ಅಧಿಕಾರಿಗಳನ್ನೊಳಗೊಂಡಂತೆ ನಡೆದ ದಾಳಿಯಲ್ಲಿ ಒಟ್ಟು 6,570 ಲೀ. ಬೆಲ್ಲದ ಕೊಳೆ, 190ಲೀ. ಕಳ್ಳಭಟ್ಟಿ ಸಾರಾಯಿ ಮತ್ತು 15 ಕೆ.ಜಿ. ಚೆಕ್ಕೆಯನ್ನು ವಶಪಡಿಸಿಕೊಂಡು ಆಂಧ್ರಪ್ರದೇಶದ ಗಡಿ ಭಾಗಗಳಲ್ಲಿ ನಾಶಪಡಿಸಲಾಗಿದೆ.
ನಂತರ ಮಾರ್ಚ್ 26 ರಂದು ಪಾವಗಡ ತಾಲೂಕಿನ ಗಡಿಭಾಗದ ಆಂಧ್ರಪ್ರದೇಶ ವ್ಯಾಪ್ತಿಯ ಕೆಲವು ತಾಂಡಗಳಲ್ಲಿ ಜಂಟಿಯಾಗಿ ದಾಳಿಯನ್ನು ನಡಿಸಿ, ಒಟ್ಟು 5490 ಲೀ. ಬೆಲ್ಲದ ಕೊಳೆ ಮತ್ತು 160 ಲೀ. ಕಳ್ಳಭಟ್ಟಿ ಸಾರಾಯಿಯನ್ನು ದಾಳಿ ನಡೆದ ಸ್ಥಳದಲ್ಲಿಯೇ ನಾಶಪಡಿಸಲಾಗಿದೆ.