ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನಿವೇಶನ ವಿವಾದ: ರು. 5 ಲಕ್ಷ ಮೌಲ್ಯದ ವಸ್ತುಗಳಿಗೆ ಬೆಂಕಿ

Rashmi Kasaragodu
Updated On : 29 Mar 2014, 2:05 am

ಕುಣಿಗಲ್: ನಿವೇಶನ ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಬೆಂಕಿಹಚ್ಚಿ ಸುಮಾರು ಐದು ಲಕ್ಷ ರು.ಮೌಲ್ಯದ ವಸ್ತುಗಳಿಗೆ ಬೆಂಕಿ ಇಟ್ಟು ನಷ್ಟ ಮಾಡಿದ್ದಾರೆಂಬ ಪ್ರಕರಣ ಅಮೃತೂರು ಪೊಲೀಸ್ ಠಾಣೆಯ ಜಿನ್ನಾಗರ ಗ್ರಾಮದಿಂದ ವರದಿಯಾಗಿದೆ. ಜಿನ್ನಾಗರ ಗ್ರಾಮದ ಲೋಕೇಶ್ ಮತ್ತು ಶ್ರೀನಿವಾಸ್ ಎಂಬುವವರು ಮಧ್ಯೆ ಕಳದೊಂದು ದಶಕದಿಂದಲೂ ನಿವೇಶನ ವಿಷಯದಲ್ಲಿ ವಿವಾದ ಏರ್ಪಟ್ಟಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. ಶ್ರೀನಿವಾಸನೇ ಗುರುವಾರ ಮಧ್ಯರಾತ್ರಿಯಂದು ಲೋಕೇಶ್ಗೆ ಸೇರಿದ ಕೊಟ್ಟಿಗೆಮನೆ ಮತ್ತು 25 ಗಾಡಿ ಹುಲ್ಲಿನ ಮೆದೆಗೆ ಬೆಂಕಿಹಚ್ಚಿದ ಪರಿಣಾಮ, ಕೊಟ್ಟಿಗೆಮನೆ, ಹುಲ್ಲಿನ ಮೆದೆ, ಕೊಟ್ಟಿಗೆ ಮನೆಯಲ್ಲಿ ಮನೆ ಕಟ್ಟಲು ಶೇಖರಿಸಲಾಗಿದ್ದ ಬೇವಿನಮರ, ಇಪ್ಪತ್ತು ಮೂಟೆ ಸಿಮೆಂಟ್, ಸಿಮೆಂಟ್ ಕಿಟಕಿ, 25 ಕ್ವಿಂಟಾಲ್ ರಾಗಿ, ಎರಡು ಕ್ವಿಂಟಾಲ್ ಬತ್ತ, ಒಂದು ಕ್ವಿಂಟಾಲ್ ಅವರೆಕಾಳು, ಒಂದು ಹೊಚ್ಚಹೊಸ ಬೈಕ್, ಒಂದು ಹಳೆಯ ಸೈಕಲ್ ಸುಟ್ಟು ಹೋಗಿದ್ದು, ರಾತ್ರಿ ಲೋಕೇಶ್ ಪತ್ನಿ  ಹೊರಬಂದಾಗ ಶ್ರೀನಿವಾಸ ಬೆಂಕಿ ಹಚ್ಚುತ್ತಿದ್ದುದನ್ನು ನೋಡಿ ಕೂಗಿಕೊಂಡ ಹಿನ್ನೆಲೆಯಲ್ಲಿ ಆತ ಪರಾರಿಯಾದ. ಮಂಜುಳ ಚೀರಾಟಕ್ಕೆ ಗ್ರಾಮಸ್ಥರಾದ ರಾಮಣ್ಣ ಇತರರು ಆಗಮಿಸಿ, ಅಗ್ನಿಶಾಮಕ ದಳಕ್ಕೆ ಕರೆಮಾಡಿ ಬೆಂಕಿ ನಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement