7ನೇ ಮಾಸಿಕ ಶಿವಾನುಭವ ಕಾರ್ಯಕ್ರಮ ಇಂದು
ತುಮಕೂರು: ತುಮಕೂರು ಗ್ರಾಮಾಂತರದ ಬೆಳ್ಳಾವಿಯ ಕಾರದ ವೀರಬಸವ ಮಹಾಸ್ವಾಮಿಗಳ ಕಾರದೇಶ್ವರ ಮಠದಲ್ಲಿ ಏಳನೆಯ ಮಾಸಿಕ ಶಿವಾನುಭವ ಕಾರ್ಯಕ್ರಮವನ್ನು ಮಾ. 30 ರಂದು ಬೆಳಗ್ಗೆ 11.30 ರಿಂದ 1.30 ರವರೆಗೆ ಹಮ್ಮಿಕೊಳ್ಳಲಾಗಿದೆ. ವಿಶೇಷ ಆಮಂತ್ರಿತರಾಗಿ ತುಮಕೂರಿನ ಉದ್ಯಮಿ ಟಿ.ಆರ್. ಕುಮಾರಸ್ವಾಮಿ, ಬೆಂಗಳೂರು ನಾಗಲಿಂಗೇಶ್ವರ ಟ್ರೇಡರ್ಸ್ನ ಕೆಂಪರಾಜ ಅರಸ್, ಬೆಳ್ಳಾವೆ ಸೋಮಶೇಖರಯ್ಯ, ಬೆಂಗಳೂರಿನ ಉಪನ್ಯಾಸಕ ಅಡವೀಶಯ್ಯ ಪಾಲ್ಗೊಳ್ಳಲ್ಲಿದ್ದಾರೆ. ಕುಣಿಗಲ್ ತಾಲೂಕು ಅಂಕನಹಳ್ಳಿ ಗವಿಮಠದ ಶಿವರುದ್ರ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ.
ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ 6.30 ರಿಂದ 7.30 ರವರೆಗೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. 9.30 ರಿಂದ 10.30 ರವರೆಗೆ ಕಾರದ ಮಹಾಶಿವಯೋಗಿಗಳ ಪಲ್ಲಕ್ಕಿ ಉತ್ಸವ ನಡೆಯಲಿದೆ.