ಯುಗಾದಿ ಹಬ್ಬದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ
ಶಿರಾ: ನಗರದ ಕೆ.ಇ.ಬಿ. ಕಾಲೋನಿಯ ಶ್ರೀರಾಮ ಮಂದಿರದಲ್ಲಿ ಚಂದ್ರಮಾನ ಯುಗಾದಿ ಹಬ್ಬದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಾರ್ಚ್ 31 ರಿಂದ ಏಪ್ರಿಲ್ 10 ರವರೆಗೆ ವಿವಿಧ ಪೂಜಾ ಕಾರ್ಯಗಳು ಶ್ರೀರಾಮ ಮಂದಿರದಲ್ಲಿ ನಡೆಯಲಿದ್ದು ಮಾ. 31 ರಂದು ಯುಗಾದಿ ದಿನದಂದು ಪಂಚಾಗ ಶ್ರವಣ ಕಾರ್ಯಕ್ರಮ.
ಏ. 1 ರಂದು ಬೇಲೂರು ನಾಗಲಕ್ಷ್ಮಿ ಅವರಿಂದ ಹರಿಕಥೆ, ಏ. 2 ರಂದು ಶಿರಾ ತಿಪ್ಪೇರುದ್ರರಾಧ್ಯರಿಂದ ಹರಿಕತೆ, ಏ. 3 ರಂದು ನಾಗಲಕ್ಷ್ಮೀ ಮೈಸೂರು ಅವರಿಂದ ಹರಿಕಥೆ, ಏ.4 ರಂದು ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಭಜನೆ, ಏ.5 ರಂದು ಎಂ.ಜಿ.ಕೊಟ್ಟೂರು ತ್ರಿವೇಣಿ ಜ್ಞಾನೇಶ್ವರ, ಶ್ರೀನಾಥಂ ಸಂಗೀತ ಸಂಸ್ಥೆ, ರಾಜೇಂದ್ರ ಮಾನಂಗಿ ಅವರಿಂದ ಸುಗಮ ಸಂಗೀತ, ಏ.6 ರಂದು ಶಿರಾದ ಗರುಡಾದ್ರಿ ಭಜನಾ ಮಂಡಳಿ ವತಿಯಿಂದ ಭಜನೆ ಮತ್ತು ದೇವರ ನಾಮ, ಏ.7 ರಂದು ಭಜನಾ ಕಾರ್ಯಕ್ರಮ, ಏ.8 ರಂದು ಕೋಲಾಟ, ಏ.9 ರಂದು ಸುಗಮ ಸಂಗೀತ, ಏ.10 ರಂದು ಹರಿಕಥೆ ಹಾಗೂ ಅದೇ ದಿನದಂದು ಶ್ರೀರಾಮ ದೇವರ ಉತ್ಸವ ನಡೆಯಲಿದೆ.