ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರತ್ನಾಂಗಿ ಆಭರಣ ಅವ್ಯವಹಾರ: ವಿಚಾರಣೆ ಮೇ 23ಕ್ಕೆ ಮುಂದೂಡಿಕೆ

Rashmi Kasaragodu
Updated On : 30 Mar 2014, 2:09 am

ಮೇಲುಕೋಟೆ: ಇಲ್ಲಿನ ಶ್ರೀಚೆಲುವ ನಾರಾಯಣಸ್ವಾಮಿ ದೇವಾಲಯದ ರತ್ನಾಂಗಿ ಆಭರಣ ಅವ್ಯವಹಾರದಲ್ಲಿ ಆರೋಪಿ ಅರ್ಚಕ ನರಸರಾಜಭಟ್ ಅವರನ್ನು  ದೋಷಮುಕ್ತ ಎಂದು ಪೊಲೀಸರು ಸಲ್ಲಿಸಿರುವ ಬಿ. ರಿಪೋರ್ಟ್ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ಪಾಂಡವಪುರ ಜೆಎಂಎಫ್ಸಿ ನ್ಯಾಯಾಲಯ ಪುರಸ್ಕರಿಸಿ ಪ್ರಕರಣದ ವಿಚಾರಣೆಯನ್ನು ಮೇ 23 ಕ್ಕೆ ಮುಂದೂಡಿದೆ.
 ವಿಶ್ವಹಿಂದೂ ಧರ್ಮ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಶ್ರೀನಿವಾಸ ನರಸಿಂಹನ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ,  ಬಿ. ರಿಪೋರ್ಟ್ ವಿರುದ್ಧ ಹಾಜರಾಗಿದ್ದ ವಕೀಲ ಪ್ರೇಮ್ ಹೈಕೋರ್ಟ್ ನೀಡಿರುವ ಆದೇಶ ಕಡೆಗಣಿಸಿ ಪೊಲೀಸರು ನ್ಯಾಯಾಂಗಕ್ಕೆ ಅಗೌರವ ತೋರುವ ಮಾದರಿಯಲ್ಲಿ ಏಕಪಕ್ಷಿಯವಾಗಿ ತನಿಖೆ ಮಾಡಿ ಪ್ರಮುಖ ಆರೋಪಿಗೆ ಕ್ಲೀನ್ ಚಿಟ್ ನೀಡಿದ್ದಾರೆ. ಆರೋಪಿ ಮಾಡಿರುವ ಕಾನೂನಿಗೆ ವಿರುದ್ಧವಾಗಿರುವ ಯಾವುದೇ ಅಂಶಗಳನ್ನು ಗಣನೆಗೆ ತೆಗೆದುಕೊಡಿಲ್ಲ. ಹೀಗಾಗಿ ಬಿ. ರಿಪೋರ್ಟ್ ವಜಾ ಮಾಡುವಂತೆ ನ್ಯಾಯಾಧೀಶರಲ್ಲಿ ಮನವಿ ಮಾಡಿದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಎಲ್ಲಾ ಸಿದ್ಧತೆಯೊಂದಿಗೆ ಮುಂದಿನ ವಿಚಾರಣೆಗೆ ಹಾಜರಾಗುವಂತೆ ಆದೇಶ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement