ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸ್ವಾತಂತ್ರ್ಯ ಚೌಕದಲ್ಲಿ ಸಿಪಿಐ ಪ್ರಚಾರ ಇಂದು

Rashmi Kasaragodu
Updated On : 30 Mar 2014, 2:10 am

ತುಮಕೂರು: ಇದೇ ಮೊದಲ ಬಾರಿಗೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಸಿಪಿಐ ಪಕ್ಷದಿಂದ ವೋಟು ಕೊಡಿ ವಾಕ್ಯದೊಂದಿಗೆ ಚುನಾವಣಾ ಪ್ರಚಾರಾಂದೋಲನಕ್ಕೆ ಮಾ. 30 ರಂದು ಬೆಳಗ್ಗೆ 10.30 ಕ್ಕೆ ತುಮಕೂರಿನ ಸ್ವಾತಂತ್ರ್ಯ ಚೌಕದಲ್ಲಿ ಚಾಲನೆ ನೀಡಲಾಗುವುದು ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ಈ ಚುನಾವಣಾ ಪ್ರಚಾರಾಂದೋಲನಕ್ಕೆ ಸಿಪಿಐನ ರಾಜ್ಯ ಮುಖಂಡ ಎನ್. ಶಿವಣ್ಣ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹಿರಿಯ ಕಮ್ಯೂನಿಸ್ಟ್ ನಾಯಕ ಟಿ.ಆರ್. ರೇವಣ್ಣ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಂಬೇಗೌಡ, ಸಹ ಕಾರ್ಯದರ್ಶಿ  ಗಿರೀಶ್, ಸಿಪಿಐ ಅಭ್ಯರ್ಥಿ ಚಿನ್ನಪ್ಪ.ವಿ, ಪಕ್ಷದ ಮುಖಂಡರಾದ ಚಂದ್ರಶೇಖರ್, ಗೌಡರಂಗಪ್ಪ,  ವಾಸುದೇವ್ ಕುಮಾರ್, ಶಶಿಕಾಂತ್, ಅಶ್ವತ್ ನಾರಾಯಣ್, ಅರುಣ್ ಕುಮಾರ್ ಮುಂತಾದ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement