ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಹಿವೇ ತಾಲೂಕು ಕಚೇರಿ ಸಂಘಟನೆ ಉದ್ಘಾಟನೆ

Rashmi Kasaragodu
Updated On : 31 Mar 2014, 12:06 pm

ಶಿರಾ : ನಗರದ ನಾಯಕರ ಹಟ್ಟಿಯಲ್ಲಿರುವ ವೈ.ಜಿ. ಕಾಂಪ್ಲೆಕ್ಸ್‌ನ 2ನೇ ಮಹಡಿಯಲ್ಲಿ ನೂತನವಾಗಿ ಕನ್ನಡ
ಹಿತರಕ್ಷಣಾ ವೇದಿಕೆ ತಾಲೂಕು ಕಚೇರಿ ಸಂಘಟನೆಯ ಜಿಲ್ಲಾಧ್ಯಕ್ಷ ಪಿಲಾಲಿ ಮಂಜು ಉದ್ಘಾಟಿಸಿದರು. ನಂತರ ನೂತನ ತಾಲೂಕು ಘಟಕದ ಪದಾಧಿಕಾರಿಗಳನ್ನು ಘೋಷಿಸಿದ ಅವರು ತಾಲೂಕು ಅಧ್ಯಕ್ಷರನ್ನಾಗಿ ಎಂ.ವಿ.ಕೇಶವ, ಉಪಾಧ್ಯಕ್ಷರನ್ನಾಗಿ ಹನುಮಂತರಾಜು, ಕಾರ್ಯಾಧ್ಯಕ್ಷರನ್ನಾಗಿ ಹೆಗ್ಗೆರೆ ಮಂಜು, ಗೌರವಾಧ್ಯಕ್ಷರನ್ನಾಗಿ ಟಿ.ರಾಜಕುಮಾರ್, ಕಾರ್ಯದರ್ಶಿಯಾಗಿ ಮಾರುತಿ, ಖಜಾಂಚಿಯಾಗಿ ಕೃಷ್ಣಚಾರ್, ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜು, ಸಹಕಾರ್ಯದರ್ಶಿಯಾಗಿ ತುಕಾರಂ, ಸಂಘಟನಾ ಕಾರ್ಯದರ್ಶಿಯಾಗಿ ವಸಂತ, ಅವರನ್ನು ಘೋಷಿಸಿದರು.


ಡಿಕ್ಕಿ: ದ್ವಿಚಕ್ರವಾಹನ ಸವಾರ ಸಾವು

ಶಿರಾ: ದ್ವಿಚಕ್ರ ವಾಹನ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ದ್ವಿಚಕ್ರ ವಾಹನ ಚಾಲಕ ಮರಣ ಹೊಂದಿರುವ ಘಟನೆ ತಾಲೂಕಿನ ರಾ.ಹೆ. 4 ಚಿಕ್ಕನಹಳ್ಳಿಯಲ್ಲಿ ನಡೆದಿದೆ.
ಬೆಂಗಳೂರು ಕಡೆಯಿಂದ ಬರುತ್ತಿದ್ದ  ಕಾರು ಚಿಕ್ಕನಹಳ್ಳಿ ಹೂವಿನ ಮಾರುಕಟ್ಟೆ ಕಡೆಯಿಂದ ರಸ್ತೆ ದಾಟುತ್ತಿದ್ದ  ದ್ವಿಚಕ್ರ ವಾಹನಕ್ಕೆ ರಭಸವಾಗಿ ಹೊಡೆದ ಕಾರಣ ಈ ಘಟನೆ ಸಂಭವಿಸಿದ್ದು ಬೈಕ್ ಸವಾರ ಕಳ್ಳಂಬೆಳ್ಳ ಹತ್ತಿರದ ವಡ್ಡನಹಳ್ಳಿ ಗ್ರಾಮವಾಸಿ ನಿಖಿಲ್ (22) ಎಂಬುವವನು ಸಾವನ್ನಪ್ಪಿದ್ದಾನೆ. ಶರತ್ ಎಂಬುವನು ಗಾಯಗೊಂಡಿದ್ದಾನೆ.
ಈ ಸಂಬಂಧ ಕಳ್ಳಂಬೆಳ್ಳ ಠಾಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement