ಬಿರುಸಿನ ಪ್ರಚಾರದಲ್ಲಿ ವಿವಿಧ ಪಕ್ಷದ ಅಭ್ಯರ್ಥಿಗಳು
ಕುಣಿಗಲ್: ಪ್ರಸಕ್ತ ಲೋಕಸಭೆ ಚುನಾವಣೆಗಳಲ್ಲಿ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪ್ರಚಾರ ಕಾರ್ಯದಲ್ಲಿ
ಕಾರ್ಯಕರ್ತರು, ಮುಖಂಡರು ತೊಡಗಿದ್ದಾರೆ.
ಬೆಂಗಳೂರು ಗ್ರಾಮಾಂತರಕ್ಕೆ ಬಿಜೆಪಿ ರಾಜ್ಯ ಯುವ ಮೋರ್ಚಾ ಅಧ್ಯಕ್ಷರೇ ಅಭ್ಯರ್ಥಿಯಾಗಿರುವ ಕಾರಣ ಯುವಮೋರ್ಚಾ ಪದಾಧಿಕಾರಿಗಳು ಭರಾಟೆ ಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಮುಖಂಡರು ಬಿಜೆಪಿಯವರಿಗೆ ಸೆಡ್ಡುಹೊಡೆಯುವಂತೆ ತಮ್ಮದೆ ದಾಟಿಯಲ್ಲಿ ಪ್ರಚಾರದಲ್ಲಿ ನಿರತರಾಗಿದ್ದು, ಪುರಸಭೆ ಅಧ್ಯಕ್ಷ ಚುನಾವಣೆಯಲ್ಲಿ ಗೆಲವು ಸಾಧಿಸಿದ ಜೆಡಿಎಸ್ ವಿಭಿನ್ನ ರೀತಿ ಪ್ರಚಾರದಲ್ಲಿ ನಿರತವಾಗಿದೆ. ಬೆಂ.ಗ್ರಾಮಾಂತರ ಲೋಕಸಭೆ ಕ್ಷೇತ್ರಕ್ಕೆ ಸೇರಿರುವ ಕುಣಿಗಲ್ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯ ಯುವಮೋರ್ಚಾ ಅಧ್ಯಕ್ಷ ಮುನಿರಾಜು ಗೌಡ ಅಭ್ಯರ್ಥಿಯಾಗಿದ್ದು, ರಾಜ್ಯದ ವಿವಿಧೆಡೆಯಿಂದ ಯುವ ಮೋರ್ಚಾ ಕಾರ್ಯಕರ್ತರು ಈಗಾಗಲೆ ತಾಲೂಕಿನ ಎಲ್ಲಾ ಹೋಬಳಿ, ಗ್ರಾಪಂಗಳ ವ್ಯಾಪ್ತಿಯಲ್ಲಿ ಒಂದು ಸುತ್ತಿನ ಪ್ರಚಾರವನ್ನು ಸದ್ದಿಲ್ಲದೆ ಮುಗಿಸಿದ್ದಾರೆ. ಇವರ ಜೊತೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್, ಕೆ.ಎಂ. ತಿಮ್ಮಪ್ಪ, ಸ್ಥಳೀಯ ಕಾರ್ಯಕರ್ತರು, ಆರ್ಎಸ್ಎಸ್ ಕಾರ್ಯಕರ್ತರೂ ತಮ್ಮದೇ ಆದ ವಿಭಿನ್ನ ತಂತ್ರದ ಮೂಲಕ ಯುಗಾದಿ ಹಬ್ಬದ ಶುಭಾಶಯ ಕೋರುವ ಜೊತೆಯಲ್ಲಿ ಮತಯಾಚನೆಗೂ ತಂತ್ರ ರೂಪಿಸಿ, ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ತಾಲೂಕಿನ ವಿವಿಧ ಮತದಾರರ ಮೊಬೈಲ್ ಫೋನ್ ಸಂಗ್ರಹಿಸಿ ಫೋನ್ನಲ್ಲೂ ಮತಯಾಚನೆಗೆ ಮುಂದಾಗಿದ್ದಾರೆ.
ಪಡೆ ಈಗಿಲ್ಲ: ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರಿಗೆ ಕಳೆದ ಲೋಕಸಭೆ ಉಪಚುನಾವಣೆಯಲ್ಲಿ ಇದ್ದಂತಹ ಪಡೆ ಈಗ ಇಲ್ಲವಾಗಿದೆ. ಅಂದು ಎಸ್.ಪಿ. ಮುದ್ದಹಮಮೇಗೌಡ, ರವಿಕಿರಣ್, ಶಶಿಕಿರಣ್ ಸೇರಿದಂತೆ ಹಲವು ಸಚಿವರು ಆಗಮಿಸಿ ಮತಯಾಚನೆ ಮಾಡಿಹೋಗಿದ್ದರು. ಆದರೆ ಈಬಾರಿ ಮುದ್ದಹನುಮೇಗೌಡ ತುಮಕೂರು ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ.