ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬೆಂಕಿ ಆಕಸ್ಮಿಕ: ಲಕ್ಷಾಂತರ ರು. ನಷ್ಟ

Rashmi Kasaragodu
Updated On : 31 Mar 2014, 12:05 pm

ಶಿರಾ: ಹೊಲವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು 1000 ಕ್ಕೂ ಹೆಚ್ಚು ವಿವಿಧ ತೋಟಗಾರಿಕೆ ಮರ ಗಿಡಗಳು ಬೆಂಕಿಗಾಯುತಿಯಾಗಿ ಲಕ್ಷಾಂತರ ರು. ನಷ್ಟವಾಗಿರುವ ಘಟನೆ ತಾಲೂಕಿನ ಬರಗೂರು ಸಮೀಪದ ಹೊಲದಲ್ಲಿ ನಡೆದಿದೆ.
ಭಾನುವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿದ್ದು, ಹೊಲದ ಮಾಲೀಕ  ಸಿದ್ದಯ್ಯ ಎಂಬುವವರಿಗೆ ಆಗದವರು ಈ ಘಟನೆಗೆ ಕಾರಣರಾಗಿದ್ದಾರೆ ಎಂದು ಮಾಲೀಕ ಸಿದ್ದಯ್ಯ ಶಂಕಿಸಿದ್ದು ಈ ಬೆಂಕಿ ಅನಾಹುತದಲ್ಲಿ 1000 ಕ್ಕೂ ಹೆಚ್ಚು ದಾಳಿಂಬೆ ಗಿಡ, 1000 ಅಡಕೆ, ಮಾವು ಗಿಡಗಳು, 300 ಕ್ಕೂ ಹೆಚ್ಚು ತ್ಯಾಗದ ಗಿಡಗಳು, 150 ಸರ್ವೇ ಮರಗಳು ಸೇರಿದಂತೆ ಸುಮಾರು 10 ಎಕರೆಯಲ್ಲಿ ಹಾಕಲಾಗಿದ್ದ ಹನಿ ನೀರಾವರಿ ಪೈಪುಗಳು ಬೆಂಕಿಗಾಹುತಿಯಾಗಿವೆ ಎಂದು ತಿಳಿಸಿದ್ದಾರೆ.  
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಲು ಶ್ರಮಿಸಿದ್ದ ಪ.ನಾ.ಹಳ್ಳಿ ಠಾಣಾಧಿಕಾರಿಗಳು ಹಾಗೂ ಬರಗೂರು ಉಪ ಠಾಣಾಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement