ಜಾತ್ರಾ ಮಹೋತ್ಸವ
ಶಿರಾ: ತಾಲೂಕಿನ ಬೆಟ್ಟಪ್ಪನಹಳ್ಳಿಯ ಇತಿಹಾಸ ಪ್ರಸಿದ್ಧ ಶ್ರೀ ಬೇವಿನಹಳ್ಳಮ್ಮ ದೇವಸ್ಥಾನಕ್ಕೆ ನೂತನ ಕಳಸ ಪ್ರತಿಷ್ಠಾಪನೆ ಮತ್ತು ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಆಂಧ್ರ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಯ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಶ್ರೀದೇವಿಯ ದರ್ಶನ ಪಡೆದ ಮಹಿಳೆಯರು ಸಂತಾನ ಭಾಗ್ಯಕ್ಕೆ ಹರಕೆ ಕಟ್ಟಿ ಕೊಂಡರೆ, ಕೇಲವರು ಇಷ್ಟಾರ್ಥ ನೆರವೇರಿದ್ದಕ್ಕೆ ಹರಕೆ ನೀಡಿ ಪುನೀತರಾದರು. ಅಲ್ಲದೆ ಜಾತ್ರೆಗೆ ಬಂದ ಭಕ್ತರಿಗೆ ಮುದ್ದೆ ಊಟ ತಯಾರಿಸಿ ಸಾವಿರಾರು ಭಕ್ತರು ಜಾತಿ ಭೇದ ಮರೆತು ಸಹ ಪಂಕ್ತಿ ಭೋಜನ ಮಾಡುವ ಮೂಲಕ ಜಾತ್ರಾ ಮಹೋತ್ಸವ ತೆರೆ ಕಂಡಿತು.