ಅಕ್ಷಯ ತದಿಗೆಗೆ ಭಕ್ತರ ಮಹಾಪೂರ
ಕೊರಟಗೆರೆ: ಅಕ್ಷಯ ತದಿಗೆ ಅಂಗವಾಗಿ ತಾಲೂಕಿನ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಾಲಯಕ್ಕೆ ಸುಮಾರು 20 ರಿಂದ 25 ಸಾವಿರ ಮಂದಿ ಭಕ್ತಾದಿಗಳು ಭೇಟಿ ನೀಡಿ ವಿಶೇಷ ಪೂಜೆಯೊಂದಿಗೆ ಮಹಾಲಕ್ಷ್ಮೀ ದೇವಿಯ ದರ್ಶನ ಪಡೆದರು. ದೇವಾಲಯಕ್ಕೆ ಭೇಟಿ ನೀಡಿದ ಎಲಾ ಭಕ್ತಾದಿಗಳಿಗೆ ದೇವಾಲಯ ಟ್ರಸ್ಟ್ನ ಅಧ್ಯಕ್ಷ ಶ್ರೀರಂಗಯ್ಯ ಮತ್ತು ಧರ್ಮದರ್ಶಿಗಳು ಹಾಗೂ ಕಾರ್ಯನಿರ್ವಹಣಾಧಿಕಾರಿ ರಮೇಶ್, ಕೇಶವಮೂರ್ತಿ, ಲಕ್ಷ್ಮಣ್ ಕುಡಿಯುವ ನೀರಿ ಮತ್ತು ನೆರಳು ಸೇರಿದಂತೆ ಪ್ರಸಾದದ ವ್ಯವಸ್ಥೆ ಮಾಡಿದರು. ದೇವಾಲಯಕ್ಕೆ ಭೇಟಿ ನೀಡಿದ ಮಹಾಲಕ್ಷ್ಮೀ ದರ್ಶನದ ನಂತರ ಚಿನ್ನದ ಅಂಗಡಿಗಳಿಗೆ ಬೇಟಿ ನೀಡಿ ಚಿನ್ನ ಖರೀದಿಸುವುದಾಗಿ ಭಕ್ತರು ತಿಳಿಸಿದರು.