ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪುರಸಭೆ ಸಾಮಾನ್ಯ ಸಭೆ ಶೀಘ್ರ ಕರೆಯಲು ಆಗ್ರಹ

Mainashree
Updated On : 2 May 2014, 11:24 am

ಕುಣಿಗಲ್: ಪುರಸಭೆಗೆ ಅಧ್ಯಕ್ಷರು ಆಯ್ಕೆಯಾಗಿ 40 ದಿನಗಳು ಕಳೆಯುತ್ತಾ ಬಂದಿದ್ದರೂ, ಚುನಾವಣೆ ಆಯೋಗ ನೀತಿ ಸಂಹಿತೆ ಸಡಿಲಗೊಳಿಸಿದ್ದರೂ, ಪುರಸಭೆ ಮುಖ್ಯಾಧಿಕಾರಿ, ಸಾಮಾನ್ಯ ಸಭೆ ಕರೆಯದಿರುವ ಬಗ್ಗೆ 12ಮಂದಿ ಪುರಸಭಾ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ, ಕೂಡಲೆ ಸಭೆ ಕರೆಯುವಂತೆ ಪುರಸಭೆ ಮುಖ್ಯಾಧಿಕಾರಿಗೆ ಒತ್ತಾಯಿಸಿದ್ದಾರೆ.
ಮಾ. 24ರಂದೆ ಪುರಸಭೆಗೆ ಅಧ್ಯಕ್ಷರು ಆಯ್ಕೆಯಾಗಿದ್ದಾರೆ. ಈ ಹಂತದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ನಂತರ ಲೋಕಸಭೆ ಚುನಾವಣೆ ಮುಗಿದ ಮೇಲೆ, ಆಯೋಗವು ನೀತಿ ಸಂಹಿತೆ ಸಡಿಲಗೊಳಿಸಿದೆ. ಈ ಮಧ್ಯೆ ಪುರಸಭೆಗೆ ಅಧ್ಯಕ್ಷರು ಅಯ್ಕೆಯಾದಾಗಿನಿಂದಲೂ ಸಾರ್ವಜನಿಕ ಸಮಸ್ಯೆ ಬಗೆಹರಿಸಲಾಗದೆ, ಪುರಸಭೆ  ಕೆಲಸವಿಲ್ಲದಂತಾಗಿದೆ. ಇನ್ನು ಸದಸ್ಯರೊಂದಿಗೆ ಚರ್ಚಿಸದ ಕಾರಣ ಕುಡಿಯುವ ನೀರು ಪೂರೈಕೆ, ನೈರ್ಮಲ್ಯ ನಿರ್ವಹಣೆ, ಕಸವಿಲೆವಾರಿ ಸೇರಿದಂತೆ,  2014-15ನೇ ಸಾಲಿಗೆ ಆಯವ್ಯಯ ಮುಂಗಡ ಪತ್ರವನ್ನು ಮಂಡಿಸದೆ, ಅನುದಾನ ಪೋಲಾಗುತ್ತಾ, ಹತ್ತು ಹಲವು ಸಮಸ್ಯೆಗಳು ತಾಂಡವವಾಡುತ್ತಿದ್ದು, ಕೂಡಲೆ ಸಾಮಾನ್ಯಸಭೆ ಕರೆಯುವಂತೆ ಸದಸ್ಯರಾದ ಚಂದ್ರಶೇಖರ್, ರಾಮು, ಜಗದೀಶ್, ಅರುಣ್ ಕುಮಾರ್, ದಸ್ತಗೀರ್, ಸಮೀವುಲ್ಲಾ, ರಂಗಸ್ವಾಮಿ, ತಾರಾದೇವಿ ಇತರರು ಮನವಿ ನೀಡಿ, ಪುರಸಭೆ ಮುಖ್ಯಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement