ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅಧ್ಯಾಪಕ ವೃತ್ತಿ ಪವಿತ್ರ: ವಿಜಯ್‌ಕುಮಾರ್ ಜೈನ್

Vishwanath S
Updated On : 5 May 2014, 12:54 pm

ಕ,ಪ್ರ,ವಾರ್ತೆ  ಮಧುಗಿರಿ  ಮೇ3
ಅಧ್ಯಾಪಕ ವೃತ್ತಿ ಪವಿತ್ರವಾದುದು. ಅಪಾರ ಶಿಷ್ಯ ವೃಂದ ಪಡೆದಿರುವ  ಅಧ್ಯಾಪಕರು ವೃತ್ತಿಗೆ ನಿವೃತ್ತಿ ಹೊಂದಿದರೂ ಪ್ರವೃತ್ತಿಗೆ ನಿವೃತ್ತಿ ಇಲ್ಲ ಎಂದು ಮಧುಗಿರಿ ವಿದ್ಯಾ  ಸಂಸ್ಥೆ ಕಾರ್ಯದರ್ಶಿ ಆರ್.ಸಿ.ವಿಜಯ್‌ಕುಮಾರ್ ಜೈನ್ ಅಭಿಪ್ರಾಯಪಟ್ಟರು.
 ಇಲ್ಲಿನ ಶ್ರೀ ಟಿ.ವಿ. ವೆಂಕಟಸ್ವಾಮಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಏರ್ಪಟಾಗಿದ್ದ ಪ್ರತಿಭಾ ಪುರಸ್ಕಾರ, ಅಂತಿಮ ವಿದ್ಯಾರ್ಥಿಗಳಿಗೆ ಸಂತೋಷ ಕೂಟ ಮತ್ತು ನಿವೃತ್ತ ಅಧ್ಯಾಪಕರುಗಳಿಗೆ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ  ಮಾತನಾಡಿದರು.
ನಿವೃತ್ತಿ ಹೊಂದಿದ ಪ್ರಾಂಶುಪಾಲ  ಪ್ರೊ.ಪಿ. ಹನುಮಂತರಾಯಡು ಮತ್ತು ಅಧ್ಯಾಪಕ ಪ್ರೊ. ಎಂ.ಮುದ್ದಯ್ಯ ಅವರ ಕರ್ತವ್ಯ ನಿಷ್ಠೆ ಬಗ್ಗೆ ಸ್ಮರಿಸಿ ಈ ಇಬ್ಬರು ಅಧ್ಯಾಪಕರು ತಮ್ಮ ಕರ್ತವ್ಯದಲ್ಲಿ ನಿವೃತ್ತಿ ಹೊಂದಿದರು ಕೂಡ ಮುಂದಿನ ದಿನಗಳಲ್ಲಿ ಕಾಲೇಜು ಅಭಿವೃದ್ಧಿಗೆ ಶ್ರಮಿಸಬೇಕು. ನಿಮ್ಮ ನಿವೃತ್ತಿ ಜೀವನ ಸುಖವಾಗಿರಲಿ ಎಂದು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿದ ಪ್ರಾಂಶುಪಾಲ ಪಿ.ಹನುಮಂತರಾಯಡು ನಮ್ಮ ಬೌದ್ಧಿಕ ಬೆಳವಣಿಗೆಗೆ ನೌಕರಿ ಕೊಟ್ಟ ಟಿ.ವಿ.ವೆಂಕಟಸ್ವಾಮಿ ಸಂಸ್ಥೆಗೆ ಮತ್ತು ನಮ್ಮ ಸೇವಾ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ  ನಾವು ಸದಾ ಚಿರ ಋಣಿ ಎಂದರು.
ಪ್ರೊ.ಎಂ.ಮುದ್ದಪ್ಪ ಇಂದಿನ ಕಲುಷಿತ ಸಮಾಜದಲ್ಲಿ ವಿದ್ಯಾರ್ಥಿಗಳು ಮುತುವರ್ಜಿ ವಹಿಸಿ ಉತ್ತಮ ಶಿಕ್ಷಣ ಕಲಿತು ಪವಿತ್ರವಾದ ಶಿಕ್ಷಕ ವೃತ್ತಿ ಆಯ್ಕೆ ಮಾಡಿಕೊಂಡು ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಪಣ ತೊಡಬೇಕು ಎಂದು ಕರೆ ನೀಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ನಗದು ಬಹುಮಾನ ವಿತರಿಸಿದರು. ಅಂತಿಮ ಬಿಎ ವಿದ್ಯಾರ್ಥಿಗಳು 3 ವರ್ಷದ ತಮ್ಮ ಅನಿಸಿಕೆ ಮೆಲುಕು ಹಾಕಿದರು. ಪ್ರಾಂಶುಪಾಲ ಎಲ್. ಮಣಿಗಯ್ಯ, ಸಿಎಓ ಬಿ.ಎಂ. ಪ್ರೇಮನಾಥ್ ಮೊದಲಾದವರು ಉಪಸ್ಥಿತರಿದ್ದರು. ಬಿ.ಎಸ್.ರಾಜಣ್ಣ ಸ್ವಾಗತಿಸಿ ಸಿ.ಕೃಷ್ಣಪ್ಪ ನಿರೂಪಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement