ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಾಸವಿ ಜಯಂತಿ ಇಂದಿನಿಂದ

Vishwanath S
Updated On : 7 May 2014, 12:10 pm

ತುಮಕೂರು: ಮೇ 7 ರಿಂದ 11 ರವರೆಗೆ ಆರ್ಯವೈಶ್ಯ ಮಂಡಳಿ, ವಾಸವಿ ಯುವಜನ ಸಂಘದ ವತಿಯಿಂದ 45 ನೇ ವರ್ಷದ ವಾಸವಿ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವಾಸವಿ ಯುವಜನ ಸಂಘದ ಅಧ್ಯಕ್ಷ ಬಿ. ಅಮರ್ ನಾಥ್ ತಿಳಿಸಿದರು.
ಅವರು ತುಮಕೂರಿನ ವಾಸವಿ ಕಲ್ಯಾಣ ಮಂಟಪದಲ್ಲಿ ಏರ್ಪಾಟಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೇ 7 ರಂದು ಬೆಳಗ್ಗೆ ವಿಶೇಷ ಪೂಜೆ, ಸಂಜೆ 6-30 ಕ್ಕೆ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ತುಮಕೂರು ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಟ.ಎಸ್. ಶಶಿಕುಮಾರ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ವಾಸವಿ ಯುವಜನಸಂಘದ ಅಧ್ಯಕ್ಷ ಬಿ. ಅಮರ್‌ನಾಥ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಸ್.ಟಿ. ವಿಜೇಂದ್ರ, ಮಹಾನಗರಪಾಲಿಕೆ ಸದಸ್ಯ ಬಿ.ಎಸ್. ನಾಗೇಶ್ ಪಾಲ್ಗೊಳ್ಳಲ್ಲಿದ್ದಾರೆ. ಅತಿಥಿಗಳಾಗಿ ಸಿ.ಎ. ಸೋಮೇಶ್ವರ ಗುಪ್ತ, ವೈಶ್ಯ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಸ್.ಆರ್. ಶ್ರೀಧರಮೂರ್ತಿ, ವಾಸವಿ ಭಜನಾ ಮಂಡಳಿ ಅಧ್ಯಕ್ಷ ಎನ್. ಲಕ್ಷ್ಮೀನಾರಾಯಣಶೆಟ್ಟಿ (ನಟರಾಜ್)  ವಾಸವಿ ಮಹಿಳಾ ಮಂಡಳಿ ಅಧ್ಯಕ್ಷೆ ಮಂಜುಳಾ ಶೇಷಣ್ಣ ಇತರರು ಉಪಸ್ಥಿತರಿರುವರು.
ಸಂಜೆ ಗೋವರ್ದನಗಿರಿ ಅಲಂಕಾರ ಏರ್ಪಡಿಸಲಾಗಿದೆ. 8 ರಂದು ಸಂಜೆ ವರಾಹ ಅಲಂಕಾರ, 9 ರಂದು ಜಿಲ್ಲಾಸ್ಪತ್ರೆಯಲ್ಲಿ ಹಣ್ಣು, ಬ್ರೆಡ್ ವಿತರಣೆ, 10 ರಂದು ತುಮಕೂರಿನಲ್ಲಿ ವಾಸವಿ ಮಾತೆಗೆ ಪುಷ್ಪಯಾಗ, 11 ರಂದು ಮಧ್ಯಾಹ್ನ ವಿಶೇಷ ಪೂಜೆ, ಸಂಜೆ 6.30 ಕ್ಕೆ ವಾಸವಿ ಜಯಂತಿ ಸಮಾರೋಪ ಏರ್ಪಾಟಾಗಿದೆ. ಸಾನಿಧ್ಯವನ್ನು ಹಿರೇಮಠಾಧ್ಯಕ್ಷ ಡಾ. ಶಿವಾನಂದ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಬಿ. ಅಮರ್‌ನಾಥ್ ವಹಿಸಲಿದ್ದಾರೆ. ಸಂಘದ ಪದಾಧಿಕಾರಿಗಳು, ಜನಾಂಗದ ಹಿರಿಯ ಮುಖಂಡರು, ಗಣ್ಯರು ಪಾಲ್ಗೊಳ್ಳಲ್ಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ನಂಜುಂಡಪ್ರಸಾದ್, ಬಿ.ಪಿ. ಮಂಜುನಾಥ್, ಸಹ ಕಾರ್ಯದರ್ಶಿ ಜಿ.ಕೆ. ಲೋಕೇಶ್ ಖಜಾಂಚಿ ಕೆ.ಎಸ್. ನವೀನ್, ಸಂಘಟನಾ ಕಾರ್ಯದರ್ಶಿ ಎನ್. ಕಾರ್ತಿಕ್, ಸಿ.ಜಿ. ನಾಗರಾಜ್, ಎಂ.ಕೆ.ಈಶ್ವರ್, ಎಚ್. ಗುರುಪ್ರಸಾದ್, ಟಿ.ಪಿ. ವಿನಯ್ ಶಂಕರ್, ಡಿ.ಎಲ್ ಲಕ್ಷ್ಮೀಶ್, ಕೆ.ಎಸ್. ರಾಘವೇಂದ್ರ, ಎಸ್.ಸಿ. ಲಕ್ಷ್ಮೀನರಸಿಂಹಮೂರ್ತಿ, ಕೆ. ಶ್ರೀನಿವಾಸ್, ಆರ್. ಎಸ್. ನವೀನ್, ಕೆ.ಆರ್. ನರೇಶ್‌ಬಾಬು, ವಿ.ಎಸ್. ಪ್ರವೀಣ್, ಕೆ.ವಿ. ರಾಜೇಶ್, ಸಿ.ಆರ್. ರಾಘವೇಂದ್ರ, ಎನ್. ಲಕ್ಷ್ಮೀನಾರಾಯಣಶ್ರೇಷ್ಠಿ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement