ಜಿಲ್ಲಾಮಟ್ಟದ ಭಜನಾ ಮೇಳ ಸ್ಪರ್ಧೆ
ಚಿಕ್ಕನಾಯಕನಹಳ್ಳಿ: ಜಾನಪದ ಮತ್ತು ತತ್ವಪದಗಳು ನಶಿಸುತ್ತಿರುವ ಈಗಿನ ಕಾಲದಲ್ಲಿ ಅವುಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವ ಹೊಣೆಗಾರಿಕೆಯನ್ನು ಮಠಮಾನ್ಯಗಳು ಮಾಡಬೇಕಾಗಿದೆ ಎಂದು ಗೋಡೇಕೆರೆ ರಂಭಾಪುರಿ ಮಠಾಧ್ಯಕ್ಷರಾದ ಸಿದ್ದರಾಮದೇಶೀಕೇಂದ್ರ ಸ್ವಾಮೀಜಿ ತಿಳಿಸಿದ್ದಾರೆ. ತಾಲೂಕಿನ ಗೋಡೇಕೆರೆ ರಂಭಾಪುರಿ ಮಠದ ವತಿಯಿಂದ ಬಸವೇಶ್ವರ ಜಯಂತಿ ಅಂಗವಾಗಿ ಜಿಲ್ಲಾಮಟ್ಟದ ಭಜನಾ ಮೇಳಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಸ್ವಾಮೀಜಿ ಇಲ್ಲಿ ತಿಳಿಸಿದರು.
10ರಂದು ಬೆಳಿಗ್ಗೆ 10.00 ಗಂಟೆಯಿಂದ ಕಿಬ್ಬನಹಳ್ಳಿ ಕ್ರಾಸ್ ಬಳಿಯಿರುವ ರಂಭಾಪುರಿ ಶಾಲಾ ಆವರಣದಲ್ಲಿ, ಜಾನಪದ, ತತ್ವಪದಗಳ ಹಾಡುಗಾರಿಕೆಯನ್ನು ಪ್ರಾರಂಭಿಸಲಿದ್ದು, ಸಿದ್ದರಾಮದೇಶೀಕೇಂದ್ರ ಸ್ವಾಮೀಜಿಗಳ ಸಾನಿಧ್ಯದಲ್ಲಿ ನಡೆಲಿದೆ. ಒಬ್ಬರು ಒಂದು ತಂಡದಲ್ಲಿ ಮಾತ್ರ ಭಾಗವಹಿಸುವುದು ಕಡ್ಡಾಯ. ತೀರ್ಪುಗಾರರ ತೀರ್ಮಾನವೇ ಅಂತಿಮ. ಭಾಗವಹಿಸಿದ ಎಲ್ಲರಿಗೂ ಗೌರವ ಧನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ತಂಡದಲ್ಲಿ ಇರುವವರ ಹೆಸರನ್ನು ದೂರವಾಣಿ ಸಂಖ್ಯೆ 9900684694 ಹಾಗೂ 9448709755 ಕರೆಮಾಡಿ