ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತಹಸೀಲ್ದಾರ್ ಕ್ಷಮೆ ಕೇಳಲು ವೈದ್ಯರ ಆಗ್ರಹ

Rashmi Kasaragodu
Updated On : 8 May 2014, 1:41 am

ಪಾವಗಡ: ಡೆಂಘೀ ಪ್ರಕರಣದ ಬಗ್ಗೆ ತಹಸೀಲ್ದಾರ್ ವಿನಾ ಕಾರಣ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಕ್ಷಮೆಯಾಚಿಸಬೇಕೆಂದು ತಾ. ಐಎಂಎ ನಿರ್ದೇಶಕ ಹಾಗೂ ಖಾಸಗಿ ಮಕ್ಕಳ ಅಸ್ಪತ್ರೆಯ ವೈದ್ಯ ಡಾ.ಕಿರಣ್ ಒತ್ತಾಯಿಸಿದ್ದಾರೆ.
ಈ ಕುರಿತು ಭಾರತೀಯ ವೈದ್ಯಕೀಯ ಮಂಡಳಿ ತಾ.ಶಾಖೆ ವತಿಯಿಂದ ಪಟ್ಟಣದ ಐಎಂಎ ಹಾಲ್ನಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅನಾರೋಗ್ಯ ನಿಮಿತ್ತ ಪೋಷಕರೊಂದಿಗೆ ಆಸ್ಪತ್ರೆಗೆ ಬಂದಿದ್ದ ಸುರೇಶ್ ಎಂಬುವರ ಪುತ್ರಿ ಸಿರಿ (6) ಎಂಬ ಬಾಲಕಿಗೆ ರಕ್ತ ಪರೀಕ್ಷೆ ಮಾಡಿದಾಗ ಬಾಲಕಿಗೆ ಡೆಂಘೀ ಹರಡಿರುವ ಬಗ್ಗೆ ಖಚಿತವಾಗಿದೆ. ಹೆಚ್ಚುವರಿ ಚಿಕಿತ್ಸೆಗೆ ಬೆಂಗಳೂರು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿಲು ಸೂಚಿಸಿದ್ದು ತಮ್ಮ ಸಲಹೆ ಪಾಲಿಸಿದ ಫೋಷಕರು ಬಾಲಕಿಯನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮನ್ನು ಭೇಟಿ ಮಾಡಿದ ತಹಸೀಲ್ದಾರ್ ಮಹಮ್ಮದ್ ಆಲ್ತಾಪ್ ಪಾಷ ಅವರು ಮಕ್ಕಳಿಗೆ ಡೆಂಘೀ ಇದೆ ಎಂದು ಹೇಳಿ ಬೆಂಗಳೂರಿಗೆ ಕಳುಹಿಸಲು ನಿಮಗೆ ಯಾವ ಅರ್ಹತೆ ಇದೆ ಎಂದು ಪ್ರಶ್ನಿಸಿ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ಕಿಡಿಕಾರಿದರು. ಖಾಸಗಿ ವೈದ್ಯರು ಹಣ ಮಾಡುವ ದಂಧೆಯಲ್ಲಿ ನಿರತರಾಗಿದ್ದರೆಂದು ಹೇಳುವ ಮೂಲಕ ತಹಸೀಲ್ದಾರ್ ವೈದ್ಯಕೀಯ ವ್ರತಿಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ಕ್ಷಮೆಯಾಚಿಸುವಂತೆ ಅವರು ಒತ್ತಾಯಿಸಿದರು. ಐಎಂಎ ಪ್ರಧಾನ ಕಾರ್ಯದರ್ಶಿ ಡಾ.ವೆಂಕಟರಾಮಯ್ಯ ಅವರು ಮಾತನಾಡಿ ಖಾಸಗಿ ವೈದ್ಯರ ಬಗ್ಗೆ ಕೇವಲವಾಗಿ ಮಾತನಾಡಿರುವ ತಹಸೀಲ್ದಾರ್ ಪಾಷ ಅವರ ವರ್ತನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬಾಲಕಿ ಸಿರಿಗೆ ಡೆಂಘೀ ಇರುವ ಬಗ್ಗೆ ಈಗಾಗಲೇ ಬೆಂಗಳೂರು ಮಣಿಪಾಲ್ ಆಸ್ಪತ್ರೆಯ ವೈದ್ಯರಿಂದ ಲ್ಯಾಬ್ ರಿಫೋರ್ಟ್ ತರಿಸಿಕೊಂಡು ಜಿಲ್ಲಾಧಿಕಾರಿಗಳಿಗೆ ವರದಿ ನೀಡಿರುವುದಾಗಿ ಅವರು ತಿಳಿಸಿ, ಕ್ಷಮೆ ಯಾಚಿಸುವಲ್ಲಿ ವಿಳಂಬ ಮಾಡಿದರೆ ತಹಸೀಲ್ದಾರ್ ವಿರುದ್ಧ ಐಎಂಎ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ  ಎಚ್ಚರಿಸಿದರು.
ಐಎಂಎ ಅಧ್ಯಕ್ಷ ಡಾ.ಚೌದರಿ, ಡಾ. ಚಕ್ಕರರೆಡ್ಡಿ, ಡಾ. ಶಿವಕುಮಾರ್, ಡಾ.ಸುಧಾಕರರೆಡ್ಡಿ, ಡಾ.ಜಯಂತಿ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement