ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ದರ ಏರಿಕೆಗೆ ಜೆಡಿಎಸ್ ಖಂಡನೆ

Rashmi Kasaragodu
Updated On : 8 May 2014, 1:38 am

ಚಿಕ್ಕನಾಯಕನಹಳ್ಳಿ: ಚುನಾವಣೆ ಮುಗಿಯುವವರೆಗೆ ಸುಮ್ಮನಿದ್ದ ಸರ್ಕಾರ ಚುನಾವಣೆ ಮುಗಿದನಂತರ ಬಸ್ ದರ ಹೆಚ್ಚಿಸಿರುವುದನ್ನು ನೋಡಿದರೆ ಜನಸಾಮಾನ್ಯರಿಗೆ ಟೋಪಿ ಹಾಕುವುದೇ ಕಾಂಗ್ರೆಸ್ ಸರ್ಕಾರದ ಹೆಗ್ಗಳಿಕೆಯಾಗಿದೆ ಎಂದು ಶೆಟ್ಟೀಕೆರೆ ಹೋಬಳಿ ಜೆಡಿಎಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ಈ ಸಂಬಂಧ  ಹೇಳಿಕೆ ನೀಡಿರುವ ಅವರು ತಾಲೂಕಿನ ರೈತರನ್ನು  ಮೂರು ವರ್ಷಗಳಿಂದ ಬರಪರಿಸ್ಥಿತಿ ಕಾಡುತ್ತಿದೆ. ಈಗ ಮಳೆ ಮಾರುತಕ್ಕೆ ರೈತರ ಅಳಿದುಳಿದಿರುವ ತೆಂಗು, ಅಡಕೆ ಮರಗಳು ನೆಲಕಚ್ಚುತ್ತಿವೆ.ಇದರ ಜೊತೆಗೆ ಗಾಯದ ಮೇಲೆ ಬರೆ ಎಳೆದಂತೆ ಸರ್ಕಾರ ಅಧಿಕಾರಕ್ಕೆ ಬಂದನಂತರ ಎರಡನೆ ಬಾರಿಗೆ ಏಕಾಏಕಿ ಬಸ್ ದರ ಏರಿಸಿ ಜನಸಾಮಾನ್ಯರನ್ನು ಸಂಕಷ್ಟಕ್ಕೀಡು ಮಾಡಿದೆ. ಪ್ರಕೃತಿ ವಿಕೋಪದಿಂದ ಹಾನಿಗೊಳಗಾಗಿರುವ ಬಗ್ಗೆ ವರ್ಷಗಳ ಹಿಂದೆ ಹಾನಿಯ ಅಂದಾಜು ಮಾಡಿದ್ದರೂ ರೈತರಿಗೆ ಪರಿಹಾರ ನೀಡುವಲ್ಲಿ ನಿಧಾನದ್ರೋಹವೆಸಗುತ್ತಿರುವ ಸರ್ಕಾರ, ಬಸ್ ದರ ಏರಿಕೆಯಂತ ಪ್ರಜೆಗಳ ಜೇಬಿಗೆ ಕತ್ತರಿ ಹಾಕುವ ಕೆಲಸದಲ್ಲಿ ಬಹ ಆತುರ ತೋರುತ್ತಿರುವುದನ್ನು ನೋಡಿದರೆ  ಸರ್ಕಾರದ ಬೊಕ್ಕಸ ಖಾಲಿಯಾಗಿರುವುದರ ಸಂಕೇತವಾಗಿದೆ. ಈಗಾಗಲೇ 10.5ರಷ್ಟು ದರ ಏರಿಕೆ ಮಾಡಿದ್ದ ಸರ್ಕಾರ ಈಗ ಶೇ.8 ರಷ್ಟು ದರ ಏರಿಕೆ ಮಾಡಿರುವುದು ಅವೈಜ್ಞಾನಿಕವಾಗಿದೆ. ಆದ್ದರಿಂದ ಸರ್ಕಾರ ಏರಿಸಿರುವ ಬಸ್ ದರವನ್ನು ಕೂಡಲೇ ಹಿಂತೆಗೆದುಕೊಳ್ಳ ಬೇಕೆಂದು ಶೆಟ್ಟೀಕೆರೆ ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಇ. ಶಶಿಧರ್, ಡಿ.ಕೆ.ಬಸವರಾಜು, ಗ್ರಾಪಂ ಸದಸ್ಯರಾದ ಎಚ್.ಎಸ್. ದಯಾನಂದ, ತೇಜು, ದೊರೆಸ್ವಾಮಿ ಆಚಾರ್, ಆರ್. ಗೋಪಿನಾಥ್, ಲಿಂಗರಾಜು, ಶಿವಲಿಂಗಯ್ಯ ಮುಂತಾದವರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement