ಬಸ್ ದರ ಏರಿಕೆ ಜನ ವಿರೋಧಿ ಕ್ರಮ
ಕನ್ನಡಪ್ರಭ ವಾರ್ತೆ ತುಮಕೂರು ಮೇ 7
ಕಾಂಗ್ರೆಸ್ ಸರ್ಕಾರ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಅನಪೇಕ್ಷಿತ ವೆಚ್ಚ ಹಾಗೂ ಭ್ರಷ್ಟಾಚಾರ ನಿಯಂತ್ರಣಗೊಳಿಸದೆ ಅವೈಜ್ಞಾನಿಕವಾಗಿ, ಬಸ್ ದರ ಏರಿಕೆ ಮಾಡಿರುವ ಕ್ರಮವನ್ನು ಜನವಿರೋಧಿ ಕ್ರಮವೆಂದು ಬಿಜೆಪಿ ತುಮಕೂರು ನಗರಾಧ್ಯಕ್ಷ ಕೆ.ಪಿ.ಮಹೇಶ ತೀವ್ರವಾಗಿ ಖಂಡಿಸಿದ್ದಾರೆ.
ಅವರು ಬುಧವಾರ ಬಿಜೆಪಿ ತುಮಕೂರು ನಗರ ಘಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣದ ಎದುರು ಬಸ್ ದರ ಶೇಕಡ 8 ರಷ್ಟು ಏರಿಕೆ ಮಾಡಿರುವ ಕ್ರಮವನ್ನು ವಿರೋಧಿಸಿ, ರಸ್ತೆ ತಡೆದು ಭಾರೀ ಪ್ರತಿಭಟನೆಯನ್ನು ಬಿಜೆಪಿ ನಗರಾಧ್ಯಕ್ಷ ಕೆ.ಪಿ. ಮಹೇಶರವರ ನೇತೃತ್ವದಲ್ಲಿ ನಡೆಸಿತು.
ಬಸ್ ದರ ಏರಿಕೆ ಜನಸಾಮಾನ್ಯರ ಮೇಲೆ ಭಾರೀ ಹೊರೆಯಾಗಿದ್ದು, ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಅನಾವೃಷ್ಟಿಯಿಂದ ಜನರು ತತ್ತರಿಸುತ್ತಿರುವ ಸಂದರ್ಭದಲ್ಲಿ, ಸಾರಿಗೆ ನಿಗಮಗಳ
ಅನಧಿಕೃತ ವೆಚ್ಚ, ದುರಾಡಳಿತ, ಸೋರಿಕೆ ತಡೆಯುವುದಲ್ಲದೆ, ಆಡಳಿತದಲ್ಲಿ ಅಗತ್ಯ ಬಿಗಿ ಕ್ರಮ ಕೈಗೊಂಡು ಕಾರ್ಯಕ್ಷಮತೆ ಉತ್ತಮಪಡಿಸಿಕೊಂಡು ಆದಾಯ ಉತ್ತಮ ಪಡಿಸಿಕೊಳ್ಳುವುದನ್ನು ಬಿಟ್ಟು, ಸಾರಿಗೆ ಸಂಸ್ಥೆಗಳಲ್ಲಿನ ಭಾರೀ ನಷ್ಟದ ಹೊರೆಯನ್ನು ಜನಸಾಮಾನ್ಯರ ಮೇಲೆ ಏರಿಕೆ ಮಾಡಿರುವುದನ್ನು ಕೆ.ಪಿ. ಮಹೇಶ ತೀವ್ರವಾಗಿ ವಿರೋಧಿಸಿದರು.
2ನೇ ಬಾರಿ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷದ ಅವಧಿಯಲ್ಲಿ ಎರಡನೇ ಬಾರಿ, ಸಾರಿಗೆ ಪ್ರಮಾಣ ದರ ಏರಿಕೆ ಮಾಡಿರುವುದನ್ನು ಜನ ವಿರೋಧಿ ಕ್ರಮವೆಂದು ಟೀಕಿಸಿ, ಏರಿಸಿರುವ ಸಾರಿಗೆ ದರವನ್ನು ಈ ಹಿಂದೆ ಇದ್ದ ಸಾರಿಗೆ ದರದಂತೆ ಮುಂದುವರೆಸಬೇಕೆಂದು ಒತ್ತಾಯಿಸಿದ್ದಾರೆ.
ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ ನಗರ ಪ್ರಧಾನ ಕಾರ್ಯದರ್ಶಿ ನಾಗಭೂಷಣ (ಕುಭೇರ), ಕಾರ್ಯದರ್ಶಿ ಕೆ.ಉಮಾಶಂಕರ್, ಕೆ.ಎಸ್. ವಿಶ್ವನಾಥ್, ತೇಜಮಣಿ, ಹಿಂದುಳಿದ ವರ್ಗ ಮೋರ್ಚಾದ ನಗರಾಧ್ಯಕ್ಷ ಅಣ್ಣೆತೋಟ ಶ್ರೀನಿವಾಸ್, ಕಾರ್ಯದರ್ಶಿ ಕೃಷ್ಣಮೂರ್ತಿ, ಎ.ಪಿ.ಎಂ.ಸಿ. ಸದಸ್ಯ ಧನಿಯಾಕುಮಾರ್, ಪಾಲಿಕೆ ಸದಸ್ಯ ಕರುಣಾರಾಧ್ಯ, ಮಂಜುಳಾ ನಿರಂಜನ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಪ್ರೇಮಾಹೆಗ್ಗಡೆ, ಕಾರ್ಯದರ್ಶಿ ಕೋಮಲ, ಮಹಿಳಾ ಮೋರ್ಚಾ ನಗರಾಧ್ಯಕ್ಷೆ ಗೀತಾ, ಪ್ರಧಾನ ಕಾರ್ಯದರ್ಶಿ ಡಿ.ಸೌಭಾಗ್ಯ, ಜಿಲ್ಲಾ ಎಸ್.ಟಿ. ಮೋರ್ಚಾ ಉಪಾಧ್ಯಕ್ಷೆ ವರಮಹಾಲಕ್ಷ್ಮೀ, ಹಿಂದುಳಿದ ವರ್ಗ ಮೋರ್ಚಾದ ಜಿಲ್ಲಾಕಾರ್ಯದರ್ಶಿ ಪ್ರೇಮಲತಾ, ಎಸ್.ಸಿ. ಮೋರ್ಚಾ ಕಾರ್ಯದರ್ಶಿ ಯಶೋದಮ್ಮ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಗಿರಿಜಮ್ಮ, ನಗರಸಭಾ ಮಾಜಿ ಸದಸ್ಯರಾದ ಮುನಿಯಪ್ಪ, ಎಸ್.ಟಿ.ಡಿ.ನಾಗರಾಜು, ವಾಲೆಚಂದ್ರಯ್ಯ, ರಾಮಾಂಜಿನಪ್ಪ, ಹೆಚ್.ಕೆ. ನಾಗರಾಜು, ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಚಂದನ್, ಮಾಧ್ಯಮ ಪ್ರಮುಖರಾದ ರಾಜೀವ್ ಕೃಷ್ಣಮೂರ್ತಿ, ಎಚ್.ಎನ್. ಚಂದ್ರಶೇಖರ್, ಬಿಜೆಪಿ ಮುಖಂಡರಾದ ಜಿ.ಎಸ್. ನಂದಿನಾಥ್, ಡಾ.ನೀಲಕಂಠಪ್ಪ, ಶಬ್ಬೀರ್ ಅಹಮದ್, ಟಿ.ಆರ್. ಅನುಸೂಯ, ಕಮಲ, ವಿಷ್ಣುವರ್ಧನ, ನಂಜುಂಡಸ್ವಾಮಿ, ಸಾಗರ್ ಶಿವಣ್ಣ, ಹರೀಶ್, ಎಸ್.ಟಿ.ಡಿ.ಸತೀಶ್, ಸಿದ್ದರಾಜು ಗೌಡ, ಮಂಜುನಾಥ್, ಎಂ.ಗೋಪಿ, ವೆಂಕಟೇಶ್, ವೇದಮೂರ್ತಿ, ಮುನಿರಾಜು, ಸ್ಟುಡಿಯೋ ಮಂಜು, ಎನ್. ರಾಜಣ್ಣ, ಕೇಬಲ್ ಕಿಟ್ಟಿ, ಮಂಜು, ಟಿ.ಜಿ.ಮಹೇಶ್, ಸಾಗರ್, ಗಂಗಯ್ಯ, ಶ್ರೀನಿವಾಸ್, ಶಿವಕುಮಾರ್, ಸಂತೋಷ್, ರಮೇಶ್, ಚಂದ್ರು, ಮೋಹನ್ ಕುಮಾರ್, ಹನುಮಂತರಾಜು, ಬಿ.ಎಸ್. ಉಮೇಶ್ ಮುಂತಾದ ಕಾರ್ಯಕರ್ತರು ಭಾಗವಹಿಸಿದರು.
ಮನವಿ: ಬಸ್ ದರ ಏರಿಕೆ ವಿರುದ್ಧ ರಸ್ತೆ ತಡೆದು ಪ್ರತಿಭಟಿಸಿದ ನಂತರ, ಬಸ್ ದರ ಏರಿಕೆ ಮಾಡಿರುವುದನ್ನು ವಾಪಸ್ ಪಡೆದು, ಈ ಮೊದಲು ಜಾರಿಯಲ್ಲಿದ್ದ ಪ್ರಯಾಣ ದರವನ್ನೇ ಸ್ಥಿರೀಕರಿಸಬೇಕೆಂಬ ಮನವಿಯನ್ನು ಮುಖ್ಯಮಂತ್ರಿಗಳಿಗೆ ತುಮಕೂರು ಜಿಲ್ಲಾಧಿಕಾರಿಗಳು ಕಳುಹಿಸುವಂತೆ ಬಿಜೆಪಿ ತುಮಕೂರು ನಗರ ಘಟಕದ ಅಧ್ಯಕ್ಷ ಕೆ.ಪಿ.ಮಹೇಶ ಹಾಗೂ ಪಕ್ಷದ ಪ್ರಮುಖ ಪದಾಧಿಕಾರಿಗಳು, ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು.