ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಬೇಸಗೆ ಶಿಬಿರಗಳು ನೈತಿಕತೆ ರೂಪಿಸುವ ಕೇಂದ್ರಗಳಾಗಲಿ'

Rashmi Kasaragodu
Updated On : 8 May 2014, 1:41 am

ತುಮಕೂರು: ಬೇಸಗೆ ಶಿಬಿರಗಳು ನೈತಿಕತೆ ರೂಪಿಸುವ ಕೇಂದ್ರಗಳಾಗಲಿ ಎಂದು ಲೇಖಕ ಅಬ್ಬಿನಹೊಳೆ ಸುರೇಶ್ ಕರೆ ನೀಡಿದರು.
ಅವರು ತುಮಕೂರಿನ ಕಣ್ಣುಚ್ಚಾಲೆ ಮಕ್ಕಳ ಗುಂಪು, ಕರವೇ ಮಹಿಳಾ ಘಟಕದ ಸಂಯುಕ್ತಾಶ್ರಯದಲ್ಲಿ ಬಸವೇಶ್ವರ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಬೇಸಗೆ ಶಿಬಿರದ ಮುಕ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಹೊಣೆ ಬೇಸಗೆ ಶಿಬಿರಗಳದ್ದಾಗಿದೆ. ಹಾಗೆಯೇ ಮಕ್ಕಳ ನಡೆ-ನುಡಿ, ಸಾಮಾಜಿಕ ವರ್ತನೆ, ನೈತಿಕತೆಯನ್ನು ರೂಪಿಸುವ ಹೊಣೆಯೂ ಇದೆ.
 ವರ್ಷವಿಡೀ ವಿದ್ಯಾಭ್ಯಾಸದ ವಾತಾವರಣದಲ್ಲಿ ಕಾಲ ಕಳೆಯುವ ಮಕ್ಕಳು ಬೇಸಗೆ ಶಿಬಿರಗಳಂತಹ ಮುಕ್ತ ವಾತಾವರಣದಲ್ಲಿ ಅತ್ಯಂತ ಖುಷಿಯಿಂದ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಈ ಶಿಬಿರಗಳು ಮಾಡಬೇಕಿದೆ ಎಂದರು. ಇಂದಿನ ಬಿಡುವಿಲ್ಲದ ವೇಗದ ಬದುಕಿನಲ್ಲಿ ಮಕ್ಕಳಿಗೆ ಸಮಾಜದಲ್ಲಿನ ರೀತಿ-ನೀತಿಗಳನ್ನು, ಒಳ್ಳೆಯ ಗುಣಗಳನ್ನು ಕಲಿಸುವ ಗೋಜಿಗೆ ಪೋಷಕರು ಹೋಗುತ್ತಿಲ್ಲ. ಈ ಕಾರಣಕ್ಕಾಗಿ ಮಕ್ಕಳು ಸಮಾಜಕ್ಕೆ ಮಾರಕವಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಪೋಷಕರು, ಗುರು-ಹಿರಿಯರು ಒಳ್ಳೆಯ ವ್ಯಕ್ತಿತ್ವವುಳ್ಳ ಮಕ್ಕಳನ್ನು ಬೆಳೆಸುವ ಹೊಣೆಗಾರಿಕೆಯನ್ನು ಎಂದೂ ಮರೆಯಬಾರದು ಎಂದರು.
ಸಮಾರಂಭ ಉದ್ಘಾಟಿಸಿದ ಲೇಖಕಿ ಸುಶೀಲಾ ಸದಾಶಿವಯ್ಯ ಮಾತನಾಡಿ, ಆರೋಗ್ಯವೇ ಭಾಗ್ಯ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಬೇಕು ಎಂದರು.
ನಮ್ಮ ಆರೋಗ್ಯ ನಾವು ತಿನ್ನುವ ಆಹಾರದ ಮೇಲೆ ನಿರ್ಧಾರವಾಗುತ್ತದೆ ಎಂದರು.ಮುಖ್ಯ ಅತಿಥಿಗಳಾಗಿದ್ದ ಉಪನ್ಯಾಸಕಿ ಶಾಂತಾ ಕಂಪಾರಳ್ಳಿ ಮಾತನಾಡಿ, ಮಕ್ಕಳಲ್ಲಿ ಹಿಂಜರಿಕೆ ಮನೋಭಾವವನ್ನು ಬೆಳೆಸಬಾರದು ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement