ಮಳೆ ನೀರು ಮನೆಗೆ ನುಗ್ಗಿ ದವಸ ಧಾನ್ಯಕ್ಕೆ ಹಾನಿ
ಪಾವಗಡ: ಮನೆಗೆ ಮಳೆ ನೀರು ನುಗ್ಗಿ ಅಪಾರ ಪ್ರಮಾಣದ ವಸ್ತುಗಳು ನಷ್ಟವಾದ ಘಟನೆ ಪಟ್ಟಣದ ಪತಂಜಲಿ ನಗರದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ರಾತ್ರಿ 8ಗಂಟೆಯ ಸಮಯದಲ್ಲಿ ಸುಮಾರು 2ಗಂಟೆಗಳ ಕಾಲ ಪಟ್ಟಣದಲ್ಲಿ ಬಿದ್ದ ಮಳೆಯಿಂದ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಪಕ್ಕದ ರಾಜೀವ್ ಗಾಂಧಿ ಕ್ರೀಡಾಂಗಣದಿಂದ ಹರಿದು ಬಂದ ಮಳೆ ನೀರು ಪಜಂತಲಿ ನಗರದ ಪುರಸಭೆ ವಸತಿ ಗ್ರಹಗಳಲ್ಲಿ ವಾಸವಾಗಿದ್ದ ಪ್ರಕಾಶಪ್ಪ ಎಂಬುವರ ಮನೆಗೆ ನೀರು ನುಗ್ಗಿದ ಪರಿಣಾಮ ಕಡಲೇಕಾಯಿ, ಅಕ್ಕಿ ಹಾಗೂ ಇತರೆ ದವಸ ಧಾನ್ಯಗಳು ಸೇರಿದಂತೆ ಮನೆಯಲ್ಲಿದ್ದ ಅಪಾರ ಪ್ರಮಾಣದ ವಸ್ತುಗಳು ನಷ್ಟವಾಗಿವೆ.
ಕ್ರೀಡಾಂಗಣದ ನೀರು ಸರಾಗವಾಗಿ ಹರಿದು ಹೋಗಲು ಸಮರ್ಪಕ ಚರಂಡಿ ನಿರ್ಮಾಣಕ್ಕೆ ಆ ಭಾಗದ ಪುರಸಭೆ ಸದಸ್ಯರು ಮತ್ತು ಮುಖಂಡರಿಗೆ ಅನೇಕ ಬಾರಿ ಮನವಿ ಮಾಡಿದರೂ ಚರಂಡಿ ನಿರ್ಮಿಸುವಲ್ಲಿ ನಿರ್ಲಕ್ಷ್ಯವಹಿಸಿದ ಕಾರಣ ಈ ಅನಾಹುತ ಎದುರಾಗಿದೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಮಳೆಯಿಂದ ತೆಂಗು, ಅಡಕೆ ತೋಟ ನಾಶ
ಪಾವಗಡ: ಭಾರಿ ಮಳೆಯಿಂದ ತೆಂಗು ಮತ್ತು ಅಡಕೆ ತೋಟ ಸಂಪೂರ್ಣವಾಗಿ ನಾಶವಾಗಿರುವ ಘಟನೆ ತಾ.ಸಿ.ಕೆ.ಪುರ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ರಾತ್ರಿ ತಾಲೂಕಿನದ್ಯಂತ ಬಾರೀ ಮಳೆ ಸುರಿದಿದ್ದು ಮಳೆ ಹಾಗೂ ಗಾಳಿ ಅಬ್ಬರಕ್ಕೆ ಗ್ರಾಮದ ಬಿಜೆಪಿ ಹಿರಿಯ ಮುಖಂಡ ಆನಂದ್ರಾವ್ ಎಂಬುವರಿಗೆ ಸೇರಿದ 2ಎಕರೆ ತೆಂಗು ಮತ್ತು ಅಡಕೆ ತೋಟ ನಾಶವಾಗಿ ಲಕ್ಷಾಂತರ ರು.ಗಳ ಬೆಳೆ ನಷ್ಟವಾಗಿದೆ.