ನಿರ್ಮಲಾನಂದ ಸ್ವಾಮೀಜಿಗೆ ಗುರುವಂದನೆ ಜೂ.1ಕ್ಕೆ
ತಿಪಟೂರು: ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಆದಿಚುಂಚನಗಿರಿ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿಯವರಿಗೆ ಗುರುವಂದನೆ ಹಾಗೂ ನೂತನವಾಗಿ ಕಟ್ಟಿರುವ ಸಮುದಾಯ ಭವನದ ಭೋಜನಾಲಯ ಉದ್ಘಾಟನಾ ಸಮಾರಂಭವನ್ನು ಸಂಘದ ಅವರಣದಲ್ಲಿ ಜೂ.1ಮತ್ತು 2ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎನ್. ಚಿದಾನಂದ್ ತಿಳಿಸಿದ್ದಾರೆ.
ಜೂ.1ರ ಭಾನುವಾರ ಹೋಮ ಮತ್ತು ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ಜೂ.2ರ ಸೋಮವಾರ ಬೆಳಗ್ಗೆ 9 ಗಂಟೆಗೆ ಆಲ್ಬೂರು ಗೇಟ್ನಿಂದ ನಿರ್ಮಲಾನಂದನಾಥ ಸ್ವಾಮೀಜಿಯವರಿಗೆ ಬೈಕ್ ಹಾಗೂ ಇತರೆ ವಾಹನಗಳ ರ್ಯಾಲಿಯೊಂದಿಗೆ ತಿಪಟೂರಿನವರೆಗೆ ಭವ್ಯ ಸ್ವಾಗತ ನೀಡಲಾಗುವುದು.
ಅಂದೇ ಬೆಳಿಗ್ಗೆ 11ಗಂಟೆಗೆ ಭೋಜನಾಲಯದ ಉದ್ಘಾಟನೆ, ಗುರುವಂದನಾ ಕಾರ್ಯಕ್ರಮ ಹಾಗೂ ಉಚಿತ ಸಾಮೂಹಿಕ ವಿವಾಹ ನಡೆಯಲಿದ್ದು, ಸಮಾಜದ ವಿದ್ಯಾರ್ಥಿಗಳಿಗೆ ಸಂಜೆ 5ಗಂಟೆಗೆ 2008ನೇ ಸಾಲಿನಿಂದ 2013ನೇ ಸಾಲಿನವರೆಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಪ್ರತಿಭಾ ಪುರಸ್ಕಾರ ಸ್ವೀಕರಿಸಲು ಎಸ್ಎಸ್ಎಲ್ಸಿ ಯಿಂದ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಸಾಮೂಹಿಕ ವಿವಾಹಕ್ಕೆ ಅರ್ಹ ವಧು-ವರರು ಸೂಕ್ತ ದಾಖಲೆಗಳೊಂದಿಗೆ ತಮ್ಮ ಹೆಸರನ್ನು ಮೇ 25ರೊಳಗೆ ಸಂಘದ ಕಚೇರಿಯಲ್ಲಿ ನೊಂದಾಯಿಸಿಕೊಳ್ಳಬಹುದಾಗಿದೆ ಎಂದು ಸಂಘದ ಅಧ್ಯಕ್ಷ ಎನ್. ಚಿದಾನಂದ್ ತಿಳಿಸಿದ್ದಾರೆ.