ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮರಳು ಮಾಫಿಯಾ

Rashmi Kasaragodu
Updated On : 9 May 2014, 12:28 pm

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಮರಳು ಕಳ್ಳಸಾಗಾಣಿಕೆ ಅವ್ಯಾಹತವಾಗಿ ನಡೆದಿದ್ದು, ಜಿಲ್ಲಾಡಳಿತ ಮಾಫಿಯಾ ಜತೆ ಕೈಜೋಡಿಸಿದೆ ಎಂದು ಸೊಗಡು ಆರೋಪಿಸಿದ್ದಾರೆ.
ಮರಳನ್ನು ಅವೈಜ್ಞಾನಿಕವಾಗಿ ಬಗೆದು, ವಂಚಿಸಿ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಮುಂದೆ ಅಂತರ್ಜಲ ಸಮಸ್ಯೆ ಉದ್ಬವಿಸಲಿದೆ. ಇದಕ್ಕೆ ಸರ್ಕಾರ, ಜಿಲ್ಲಾಡಳಿತ ನೇರ ಹೊಣೆ ಎಂದು ಸೊಗಡು ತಿಳಿಸಿದ್ದಾರೆ. ಮರ, ಹಾಗೂ ಮರಳು ಕಳ್ಳ ಸಾಗಣೆಯನ್ನು ಕೂಡಲೇ ನಿಲ್ಲಿಸಬೇಕು. ಈ ಪ್ರಕರಣಗಳನ್ನು ಲೋಕಾಯುಕ್ತರಿಗೆ ವಹಿಸಬೇಕು ಎಂದು ಅರಣ್ಯ ಸಚಿವರು ಹಾಗೂ ಸಂಬಂಧ ಪಟ್ಟ ಸಚಿವರನ್ನು ಒತ್ತಾಯಿಸುವುದಾಗಿ ಸೊಗಡು ತಿಳಿಸಿದ್ದಾರೆ.
ಶಿಕ್ಷಣ ಮಾಫಿಯಾ: ಜಿಲ್ಲೆಯಲ್ಲಿ ಶಿಕ್ಷಣ ಮಾಪಿಯಾ ಹಾವಳಿ ಹೆಚ್ಚಾಗಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ವ್ಯಾಪಾರೀಕರಣವಾಗಿದೆ ಇದರಿಂದ ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದು, ಭಯಬೀತರಾಗಿದ್ದಾರೆ. ತುಮಕೂರು ನಗರದಲ್ಲಿ ಕೇಂದ್ರ ಪಠ್ಯಕ್ರಮ ಎಂದು ಬೋರ್ಡ್ ಹಾಕಿಕೊಂಡು ಆರಂಭವಾಗಿರುವ ಶಾಲೆಗಳು ವಾರ್ಷಿಕ 50 ಸಾವಿರಕ್ಕಿಂತಲೂ ಹೆಚ್ಚು ಶುಲ್ಕ ವಸೂಲಿ ಮಾಡುತ್ತಿರುವುದು ಖಂಡನೀಯ. ಶಿಕ್ಷಣ ಹಕ್ಕು ಕಾಯ್ದೆಯಡಿ ಸಾಮಾನ್ಯ, ಮಧ್ಯಮ ವರ್ಗದ ಕುಟುಂಬಗಳಿಗೆ ಶಿಕ್ಷಣ ಇಲಾಖೆ ಸೂಕ್ತ ವ್ಯವಸ್ಥೆ ಕಲ್ಪಿಸಿ, ಡೊನೇಷನ್ ನಿಯಂತ್ರಿಸಿ, ಪಾರದರ್ಶಕವಾಗಿಡದಿದ್ದಲ್ಲಿ, ಶಿಕ್ಷಣ ತಾರತಮ್ಯ ಪಿಡುಗಿಗೆ ಭವಿಷ್ಯದ ಮಕ್ಕಳು ಬಲಿಯಾಗಬೇಕಾಗುತ್ತದೆ ಎಂದ ಸೊಗಡು,ಕೂಡಲೇ ಶಿಕ್ಷಣ ಮಾಫಿಯಾ ನಿಯಂತ್ರಿಸುವಂತೆ ಸರ್ಕಾರವನ್ನು, ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ತಮ್ಮ ಶಾಸಕತ್ವದ ಅವಧಿಯಲ್ಲಿ ಶಿಕ್ಷಣ ತಾರತಮ್ಯ ತಡೆಗಟ್ಟಲು, ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ( ಸಪೂಕಾ, ಎಂಪ್ರೆಸ್ ಪಪೂ ಕಾಲೇಜು, ಪ್ರೌಢಶಾಲೆ ಸೇರಿದಂತೆ) ಕಾಯ್ದುಕೊಳ್ಳಲಾಗಿತ್ತು. ಉತ್ತಮ ಮೂಲಭೂತ ಸೌಲಭ್ಯ ಕಲ್ಪಿಸಲಾಗಿತ್ತು. ಎಸ್,ಸಿ, ಎಸ್‌ಟಿ, ಹಿಂದುಳಿದ ವರ್ಗಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಲಾಗಿತ್ತು ಎಂದು ಸೊಗಡು ತಿಳಿಸಿದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments