ಕರಾಟೆಯಿಂದ ದೇಹದ ಅಂಗಾಂಗಗಳಿಗೆ ವ್ಯಾಯಾಮ
ಕ.ಪ್ರ.ವಾರ್ತೆ ತುಮಕೂರು ಮೇ 9
ಕರಾಟೆ ಎಂಬುದು ದೇಹದ ಅಂಗಾಂಗಗಳಿಗೆ ವ್ಯಾಯಾಮ ಮತ್ತು ಆರೋಗ್ಯ ನೀಡುತ್ತದೆ ಎಂದು ಜಿಲ್ಲಾಧಿಕಾರಿ ಸತ್ಯಮೂರ್ತಿ ಅಭಿಪ್ರಾಯಪಟ್ಟರು.
ಅವರು ನಗರದ ಎಂ.ಜಿ. ರಸ್ತೆಯ ಸುಪ್ರಭಾ ಹಾಲ್ನಲ್ಲಿ ಕರಾಟೆ ಪ್ರಾಚೀನ ಆಯುಧಗಳ ಬಳಕೆಯ 2 ದಿನದ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ಚಿಕ್ಕಮಕ್ಕಳಿಗೆ ತರಬೇತಿ ನೀಡುವುದು ಒಳ್ಳೆಯದು. ಮಕ್ಕಳು ಈ ವಿದ್ಯೆಯನ್ನು ಕಲಿತು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಕರಾಟೆ ಅಂಡ್ ಕೊಬುಡೋ ಫೆಡರೇಷನ್ ಆಫ್ ಇಂಡಿಯಾ ಸಂಸ್ಥೆಯಿಂದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಡಾ. ಸೂಲಗಿತ್ತಿ ನರಸಮ್ಮ ಅವರನ್ನು ಜಿಲ್ಲಾಧಿಕಾರಿ ಸತ್ಯಮೂರ್ತಿ ಅಭಿನಂದಿಸಿದರು.
ಪಾವಗಡ ಶ್ರೀರಾಮ್ ಮಾತನಾಡಿ, ಕರಾಟೆ ಪ್ರಾಚೀನ ಕಾಲದ ಆಯುಧಗಳ ತರಬೇತಿಯನ್ನು ಬೇರೆ ದೇಶಗಳಲ್ಲಿ ರಕ್ಷಣಾ ಇಲಾಖೆಗಳು ಕೊಬುಡೋ ಸಂಸ್ಥೆ ವತಿಯಿಂದ ನೀಡುತ್ತಿದ್ದಾರೆ ಎಂದರು. ರಾಷ್ಟ್ರೀಯ ಕರಾಟೆ ಪಟು ಕೆ. ರಂಗಸ್ವಾಮಿಯವರು ಮೈಕ್ ಟೈಸನ್ ಕುಸ್ತಿಯಲ್ಲಿ ಭಾಗವಹಿಸಿದ್ದ ಥಾಯ್ಲ್ಯಾಂಡ್ಕ ಕ್ರೀಡಾಂಗಣದಲ್ಲಿ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದರು.
ಅವರ ಗುರುಗಳಾದ ಶಿಹಾನ್ ಎಚ್. ಮಲ್ಲಿಕಾರ್ಜುನ್ ಕರಾಟೆಯಲ್ಲಿ ಶಿಹಾನ್ ಪಡೆದ ಭಾರತ ದೇಶದಲ್ಲಿ ಪ್ರಮುಖರಾಗಿದ್ದಾರೆ. ಅವರು ನಮ್ಮ ಜಿಲ್ಲೆಯಲ್ಲಿ ಪ್ರಥಮವಾಗಿ ಈ ತರಬೇತಿ ನಡೆಸುತ್ತಿರುವುದು ಸಂತೋಷದ ವಿಷಯ ಎಂದರು. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಚಂದ್ರಕಲಾ, ಜೈನ್ ಪಬ್ಲಿಕ್ ಶಾಲೆಯ ಚೇತನ್, ವಕೀಲ ವಿಜಯ, ಲಕ್ಷ್ಮೀದೇವಮ್ಮ, ಯೋಗೀಶ್, ಶಿವರಾಜ್ ಹಾಜರಿದ್ದರು.