ಸರ್ಕಾರಿ ಬಾಲಕಿಯರ ಪ.ಪೂ ಕಾಲೇಜಿಗೆ ಶೇ.82.05 ಫಲಿತಾಂಶ
ಶಿರಾ: ಸರ್ಕಾರಿ ಬಾಲಕಿಯರ ಪ.ಪೂ ಕಾಲೇಜಿಗೆ ಶೇ 82.05 ರಷ್ಟು ಫಲಿತಾಂಶ. 26 ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್ ಪಡೆದಿದ್ದು, 137 ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ, 61 ವಿದ್ಯಾರ್ಥಿನಿಯರು ದ್ವಿತೀಯ ದರ್ಜೆಯಲ್ಲಿ, 32 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಹೆಚ್ಚು ಅಂಕ ಪಡೆದವರಲ್ಲಿ ಲಾವಣ್ಯ ಜಿ.ಎಸ್. (547), ಮಮತಾ ಜಿ.ಆರ್ (546), ಕಾವ್ಯಶ್ರೀ (538), ಪುಷ್ಪಲತಾ (538), ಕವಿತಾ ಎಂ.ಎನ್ (538) ಒಟ್ಟು 26 ವಿದ್ಯಾರ್ಥಿನಿಯರು 500 ಕ್ಕಿಂತ ಹೆಚ್ಚು ಅಂಕ, ಲೆಕ್ಕ ಶಾಸ್ತ್ರದಲ್ಲಿ 10 ವಿದ್ಯಾರ್ಥಿನಿಯರು 100 ಕ್ಕೆ 100 ಅಂಕ ಪಡೆದಿದ್ದಾರೆ.