ಇದ್ದೂ ಇಲ್ಲದಂತಿರುವ ಮೀನುಗಾರಿಕೆ ಇಲಾಖೆ
ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಮೈಸೂರು ಮಹಾರಾಜರಿಂದ ನಿರ್ಮಾಣವಾದ ಬೋರನಕಣಿವೆ ಜಲಾಶಯವಿದ್ದು, ಮೀನು ಸಾಕಾಣಿಕೆಗೆ ಅನುಕೂಲಕರ ವಾತಾವರಣವಿದ್ದರು ಮೀನುಗಾರಿಕೆ ಇಲಾಖೆ ಹೊಣೆಗೇಡಿತನದಿಂದ ತಾಲೂಕಿನಲ್ಲಿ ಮೀನು ಕೃಷಿ ಕುಂಠಿತಗೊಂಡಿದೆ. ಪಟ್ಟಣದ ತಾಪಂ ಕಚೇರಿ ಬಳಿ ಹತ್ತಾರು ಲಕ್ಷ ರು.ಗಳ ವೆಚ್ಚದಲ್ಲಿ ನಿರ್ಮಿಸಿರುವ ಬೃಹತ್ ಸಿಮೆಂಟ್ ನೀರಿನ ತೊಟ್ಟಿ ಮೀನು ಮರಿ ತಂದು ಸಾಕಿ ನಂತರ ಮೀನು ಕೃಷಿಮಾಡುವವರಿಗೆ ವಿತರಿಸುವ ಸದುದ್ದೇಶದಿಂದ ನಿರ್ಮಿಸಲಾಗಿದೆ. ಆದರೆ ನೀರಿನ ವ್ಯವಸ್ಥೆ ಮಾಡುವಲ್ಲಿ ವಿಫಲವಾದ ಪರಿಣಾಮ ತೊಟ್ಟಿ ಶಿಥಿಲವಾಗಿದೆ. ಜಿಲ್ಲೆಯಲ್ಲಿರುವ ಕೆಲವೇ ದೊಡ್ಡ ಜಲಾಶಗಳ ಪೈಕಿ ಬೋರನಕಣಿವೆ ಒಂದಾಗಿದೆ.