ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮುಂಗಾರು ಚುರುಕು: ರೈತರಲ್ಲಿ ಹುರುಪು

Rashmi Kasaragodu
Updated On : 12 May 2014, 1:24 am

ತಿಪಟೂರು: ಈ ವರ್ಷ ಸಕಾಲಕ್ಕೆ ಬಿದ್ದ ಪೂರ್ವ ಮುಂಗಾರು ಮಳೆಯಿಂದಾಗಿ ರೈತನ ಮುಖದಲ್ಲಿ ಹರ್ಷ ಮೂಡಿದ್ದು, ಕಳೆದ ವಾರದಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.
ಭರಣಿ ಮಳೆ ತುಸು ಬಿರುಸಾಗಿಯೇ ಬಂದಿದ್ದು, ರೈತರು ಉಳುಮೆ ಮಾಡಿ ಪೂರ್ವ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಎಳ್ಳು, ಅಲಸಂದೆ ಬೆಳೆಗಳನ್ನು ಬಿತ್ತನೆ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಆರ್ಥಿಕ ಬೆಳೆಯಾಗಿ ಪೂರ್ವ ಮುಂಗಾರು ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಗೋಮಾಳಗಳಲ್ಲಿ ಒಣಗಿದ್ದ ಮೇವಿನ ಬೇರುಗಳು ಚಿಗುರೊಡಯುತ್ತಿದ್ದು ಜಾನುವಾರುಗಳಿಗೆ ಕೆಲದಿನಗಳಲ್ಲಿ ಹಸಿರು ಮೇವು ಸಿಗುವ ನಿರೀಕ್ಷೆಯಿದೆ.
ಕಳೆದ 2-3 ತಿಂಗಳಿಂದ ಜಾನುವಾರುಗಳಿಗೆ ಹಸಿರು ಮೇವು ಮತ್ತು ನೀರು ಸಿಗದೆ ರೈತನ ಬದುಕು ದುಸ್ತರವಾಗಿತ್ತು. ಆದರೆ ಈಗ ಒಂದೆರಡು ಹದ ಮಳೆ ಬಂದಿರುವುದರಿಂದ ಬಿತ್ತನೆ ಕಾರ್ಯ ಮುಗಿಯುವ ಹಂತಕ್ಕೆ ಬಂದಿದೆ. ಮುಂದಿನ ಒಂದೆರಡು ತಿಂಗಳಲ್ಲಿ ಮಳೆರಾಯ ಕೃಪೆ ತೋರಿದಲ್ಲಿ ಪೂರ್ವ ಮುಂಗಾರು ಬೆಳೆಗಳು ರೈತನ ಕೈ ಸೇರಿ ತುಸು ನೆಮ್ಮದಿ ಕಾಣಬಹುದು. ಬಿತ್ತನೆ ಬೀಜ ಮತ್ತು ಗೊಬ್ಬರಗಳ ಬೆಲೆ ದುಪ್ಪಟ್ಟಾಗಿದ್ದು, ರೈತರು ಸಾವಿರಾರು ರುಪಾಯಿ ಸಾಲ ಮಾಡಿ ದುಬಾರಿ ಕೂಲಿ ನೀಡಿ ಭೂಮಿ ಉಳುಮೆ ಮಾಡಿ ಬಿತ್ತನೆ ನಡೆಸಿದ್ದು ಮಳೆರಾಯ ಮತ್ತೆಲ್ಲಿ ಕೈಕೊಡುವನೋ ಎಂಬ ಆತಂಕದಲ್ಲೇ ರೈತರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement