ರಂಗನಾಥ ಪ.ಪೂ ಕಾಲೇಜಿಗೆ ಶೇ.85.60 ಫಲಿತಾಂಶ
ಶಿರಾ: ನಗರದ ಕೆ. ಮಲ್ಲಣ್ಣ ಸ್ಮಾರಕ ರಂಗನಾಥ ಪ.ಪೂ ಕಾಲೇಜಿಗೆ ಶೇ.85.60 ಫಲಿತಾಂಶ ಲಭಿಸಿದೆ. 146 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, 12 ಮಂದಿ ಅತ್ಯುನ್ನತ ಶ್ರೇಣಿ, 63 ಪ್ರಥಮ ಶ್ರೇಣಿ, 29 ದ್ವಿತೀಯ ಶ್ರೇಣಿ ಹಾಗೂ 21 ಮಂದಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಅಭಿಲಾಶ್ ಎಸ್.ಯು (545), ಮಂಜುನಾಧ ಕೆ (543), ಚೇತನ ಎಂ.ಡಿ (543), ಅನುಪಮ ಎಸ್.ಜೆ (542), ಪೂಜಿತಾ ಎಸ್.ಆರ್ (542), ನಾಜೀಯಾ ಖಾನಂ (538), ಚಂದ್ರಕಲಾ ಆರ್ (534), ಐಶ್ವರ್ಯ ಜೆ.ಎನ್ (528), ಚೈತ್ರ ಟಿ ಎಸ್ (525), ವಿದ್ಯಾ ಕೆ (519). ಾಣಿಜ್ಯ ವಿಭಾಗದಲ್ಲಿ ಸುನಿತಾ (541), ರುಕ್ಮಿಣಿ (537) ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.