ವ್ಯಕ್ತಿ ಮೇಲೆ ಹಲ್ಲೆ: ದೂರು
ಕುಣಿಗಲ್: ಯಲಿಯೂರು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಹಾಕಿದ್ದ ಪಕ್ಷವೊಂದರ ಬ್ಯಾನರ್ ಹಾನಿಗೊಳಿಸಿದ್ದನ್ನು ಪ್ರಶ್ನಿಸಿದ್ದಕ್ಕೆ, ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲೂಕಿನ ಯಲಿಯೂರು ಗ್ರಾಮದಲ್ಲಿ ರೇಣುಕಾ ಎಲ್ಲಮ್ಮ ದೇವಿ ಹಬ್ಬದ ಅಂಗವಾಗಿ ಸಾರ್ವಜನಿಕ ರಸ್ತೆಯ ಪ್ರಸನ್ನ ಎಂಬವರು
ಮನೆ ಎದುರು ಗ್ರಾಮದೇವತೆ ಹಬ್ಬಕ್ಕೆ ಶುಭಕೋರುವ ಸಂದೇಶ ಜೊತೆಯಲ್ಲಿ ಮಾಜಿ ಶಾಸಕರಾದ ಮುದ್ದಹನುಮೇಗೌಡ, ಬಿ.ಬಿ. ರಾಮಸ್ವಾಮಿಗೌಡ ಮತ್ತು ಸಂಸದ ಡಿ.ಕೆ.ಸುರೇಶ್ ಭಾವಚಿತ್ರ ವಿರುವ ಬ್ಯಾನರ್ ಹಾಕಲಾಗಿತ್ತು. ಇದನ್ನು ಗ್ರಾಮದ ನಾಗರಾಜು, ನಂಜಪ್ಪ.ಸುರೇಶ ಮತ್ತು ಚಿಕ್ಕು ಎಂಬವರು ಹರಿದಿದ್ದು, ಪ್ರಶ್ನಿಸಲು ಹೋದ ದೊಡ್ಡಬಸವಯ್ಯ ಎಂಬಾತನಿಗೆ ಥಳಿಸಿ, ಕೊಲೆ ಬೆದರಿಕೆ ಹಾಕಿದ್ದಲ್ಲದೆ, ಬ್ಯಾನರ್ಗೆ ಬೆಂಕಿ ಹಚ್ಚಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಸವಯ್ಯ ಕುಣಿಗಲ್ ಠಾಣೆಗೆ ದೂರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.