ಎಎಸ್ಪಿ-ಎಎಸ್ಐ ವಾಗ್ವಾದ
ಕುಣಿಗಲ್: ಕ್ಷುಲ್ಲಕ ಕಾರಣಕ್ಕೆ ಪ್ರಭಾರ ಎಎಸ್ಪಿ ಮತ್ತು ಎಎಸ್ಐ ನಡುವೆ ವಾಗ್ವಾದ ನಡೆದು, ಎಎಸ್ಪಿ ವಿರುದ್ದ ಕ್ರಮ ಕೈಗೊಳ್ಳುವಂತೆ ಎಎಸ್ಐ ಒಬ್ಬರು ಹಿರಿಯ ಅಧಿಕಾರಿಗಳ ಮೊರೆ ಹೋಗಿರುವ ಘಟನೆ ತಾಲೂಕಿನ ಅಮೃತೂರು ಪೊಲೀಸ್ ಠಾಣೆಯಿಂದ ವರದಿಯಾಗಿದೆ.
ಅಮೃತೂರು ಪೊಲೀಸ್ ಠಾಣೆಗೆ ಐಪಿಎಸ್ ದರ್ಜೆಯ ಅಧಿಕಾರಿ ಧರ್ಮೇಂದ್ರಕುಮಾರ್ಮೀನಾ ಎಂಬುವವರನ್ನು ಪ್ರಭಾರ ಎಎಸ್ಐ ಆಗಿ ನಿಯೋಜಿಸಲಾಗಿದೆ. ಸೋಮವಾರ ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯ ಎಡೆಯೂರು ಉಪ ಠಾಣೆಯಲ್ಲಿ ಎಎಸ್ಐ ಕೃಷ್ಣಮೂರ್ತಿಯವರನ್ನು ಕರ್ತವ್ಯದ ಮೇಲೆ ನಿಯೋಜಿಸಲಾಗಿತ್ತು, ಆದರೆ, ಸೋಮವಾರ ಠಾಣೆಯ ಪ್ರಬಾರ ಎಎಸ್ಐ ಗಸ್ತಿಗೆ ಬಂದಾಗ, ಪ್ರಭಾರ ಎಎಸ್ಐ ಉಪ ಠಾಣೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಈ ಸಮಯದಲ್ಲಿ ಎಡೆಯೂರಿನಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಕೆಲ ಗ್ರಾಮಸ್ಥರು ಉಪ ಠಾಣೆಗೆ ದೂರು ನೀಡಲು ಬಂದಿದ್ದು, ಠಾಣೆಯಲ್ಲಿ ಯಾರು ಇಲ್ಲವೆಂದು ಅಮೃತೂರು ಠಾಣೆಯ ಪ್ರಭಾರ ಎಎಸ್ಐ ಅವರಿಗೆ ಮನವಿ ಮಾಡಿದ ಮೇರೆಗೆ, ಖುದ್ದು ಎಸ್ಐ ದೂರು ಸ್ವೀಕರಿಸಿ, ಉಪ ಠಾಣೆಯ ಎಲ್ಲ ಸಿಬ್ಬಂದಿಯನ್ನು ಸೋಮವಾರ ಸಂಜೆ ಠಾಣೆಗೆ ಬರುವಂತೆ ಸೂಚಿಸಿ ತೆರಳಿದ್ದರು. ಸೋಮವಾರ ಸಂಜೆ ಅಮೃತೂರು ಠಾಣೆಯ ಪ್ರಭಾರ ಎಸ್ಐ, ಈ ಸಂಬಂಧ ಸಿಬ್ಬಂದಿ ವಿವರಣೆ ಕೇಳಿದಾಗ ಎಎಸ್ಐ ಕೃಷ್ಣಮೂರ್ತಿ, ಬಸ್ನಿಲ್ದಾಣದಲ್ಲಿ ಗಲಭೆ ನಡೆಯುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಅಲ್ಲಿಗೆ ತೆರಳಿದ್ದರ ಬಗ್ಗೆ ಸಮಜಾಯಿಷಿ ನೀಡಿದ್ದು, ಇಬ್ಬರೂ ಅಧಿಕಾರಿಗಳ ನಡುವೆ ವಾದವಿವಾದ ನಡೆದು ಕೊನೆಗೆ ಪ್ರಭಾರ ಎಎಸ್ಐ ಅಸಂವಿಧಾನಿಕ, ಅಶ್ಲೀಲ ಪದ ಬಳಸಿದರೆಂದು ಆರೋಪಿಸಿ ಎಎಸ್ಐ ಅವರು, ಎಎಸ್ಪಿಯೊಂದಿಗೆ ವಾಗ್ವಾದಕ್ಕೆ ಇಳಿದರೆ ಎನ್ನಲಾಗಿದೆ.
ಮಾತಿನ ಭರದಲ್ಲಿ ಎಎಸೈ ಅವರಿಗೆ ಮೇಜಿನ ಮೇಲಿದ್ದ ಕರೆಗಂಟೆಯನ್ನು ಎಸೆದ್ದರಿಂದ ಎಎಸೈ ಅವರ ಎದೆಗೆ ಗಾಯವಾಗಿ, ಮೇಲು ಜೇಬಿನಲ್ಲಿದ್ದ ಕನ್ನಡಕ ಹಾನಿಯಾಗಿದ್ದು, ಮೇಲಾಧಿಕಾರಿ ವರ್ತನೆ ಖಂಡಿಸಿದ ಎಎಸ್ಐ, ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿ, ಘಟನೆಗೆ ಸಂಬಂಧಿಸಿದಂತೆ ಪ್ರಬಾರ ಎಸ್ಐ ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳ ಮೊರೆ ಹೋಗಿದ್ದಾರೆ ಎನ್ನಲಾಗಿದೆ.