ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಎಸ್ಸೆಸ್ಸೆಲ್ಸಿ: ಸರ್ಕಾರಿ ಶಾಲೆಗಳ ಸಾಧನೆ

Rashmi Kasaragodu
Updated On : 14 May 2014, 1:17 am

ಚಿಕ್ಕನಾಯಕನಹಳ್ಳಿ: ತಾಲೂಕಿನ ಒಟ್ಟಾರೆ ಫಲಿತಾಂಶ 79.01 ಆಗಿದ್ದು, ಇದರಲ್ಲಿ  21 ಸರ್ಕಾರಿ ಶಾಲೆಗಳು ಶೇ. 84.40,  33 ಅನುದಾನಿತಗಳು 75.13,6 ಅನುದಾನ ರಹಿತ ಶಾಲೆಗಳು ಶೇ. 80.00 ಫಲಿತಾಂಶ ಪಡೆದಿವೆ. ಇವರಲ್ಲಿ 1266 ಬಾಲಕರು, 1288 ಬಾಲಕಿಯರು  ಸೇರಿ  2554 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, ಅವರಲ್ಲಿ 965 ಬಾಲಕರು,1053 ಬಾಲಕಿಯರು  ಸೇರಿದಂತೆ 2018 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ 82 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದು, ಕಿತ್ತೂರು ರಾಣಿ ಚೆನ್ನಮ್ಮ ಹೆಣ್ಣುಮಕ್ಕಳ ವಸತಿ ಶಾಲೆ, ನವೋದಯ ಆಂಗ್ಲಶಾಲೆ ಹಾಗೂ ವಾಸವಿ ಆಂಗ್ಲಶಾಲೆ ಶೇ. 100 ಫಲಿತಾಂಶ ಪಡೆದಿವೆ.
ಪಟ್ಟಣದ ರೋಟರಿ ಆಂಗ್ಲಶಾಲೆಯ ಲಿಖಿತ್ (599) ರಕ್ಷಿತಾ (595) ದರ್ಶನ್ (593) ನಿವೇದಿತಾ (593) ಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಸರ್ಕಾರಿ ಶಾಲೆಗಳ 21 ವಿದ್ಯಾರ್ಥಿಗಳು,ಅನುದಾನಿತ ಶಾಲೆಗಳ 30 ವಿದ್ಯಾರ್ಥಿಗಳು, ಅನುದಾನ ರಹಿತ ಶಾಲೆಗಳ  31 ವಿದ್ಯಾರ್ಥಿಗಳು ಅತ್ಯುನ್ನತ ಸ್ಥಾನಪಡೆದಿದ್ದಾರೆ.
ಕಳೆದ ಬಾರಿಗಿಂತ ಈ ಬಾರಿ ಶೇ-4.01 ಫಲಿತಾಂಶ ಹೆಚ್ಚಾಗಿದೆ ಎಂದು ತಾಲೂಕು ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement