'ದಾದಿಯರಿಗೆ ನೈಟಿಂಗೇಲ್ ಪ್ರೇರಕ ಶಕ್ತಿ'
ಕೊರಟಗೆರೆ: ಆಸ್ಪತ್ರೆಗಳಲ್ಲಿ ದಾದಿಯರು ಪ್ಲಾರೆನ್ಸ್ ನೈಟಿಂಗೇಲ್ ಅವರ ತ್ಯಾಗ, ಅರ್ಪಣೆ ಹಾಗೂ ಸೇವಾ ಮನೋಭಾವ ಅನುಸರಿಸುವ ಮೂಲಕ ರೋಗಿಗಳಿಗೆ ಚಿಕಿತ್ಸೆ ನೀಡಿ ವೈದ್ಯರಂತಯೇ ಕಾರ್ಯನಿರ್ವಹಿಸಬೇಕು ಎಂದು ವೈದ್ಯಾಧಿಕಾರಿ ಡಾ. ರಾಮಕೃಷ್ಣಪ್ಪ ಕಿವಿಮಾತು ಹೇಳಿದರು.
ಅವರು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ಶುಶ್ರೂಷಕಿಯರ ದಿನಾಚರಣೆಯಲ್ಲಿ ಪ್ಲಾರೆನ್ಸ್ ನೈಟಿಂಗೇಲ್ ಭಾವಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ನರ್ಸ್ ಸಮುದಾಯಕ್ಕೆ ನೈಟಿಂಗೇಲ್ ಪ್ರೇರಕ ಶಕ್ತಿಯಾಗಿದ್ದು, ಅವರ ಸೇವೆ, ಅರ್ಪಣೆ ಹಾಗೂ ತ್ಯಾಗ ಮನೋಭಾವನೆ ಎಲ್ಲರೂ ಅನುಸರಿಸಸಿ ರೋಗಿಗಳಿಗೆ ತಾಯಿಯಂತೆ ಪ್ರೀತಿ, ವಾತ್ಸಲ್ಯ ನೀಡುವ ಮೂಲಕ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಲ್ಲಿ ನೈಟಿಂಗೇಲ್ರ ಆಶಯ ಸಾರ್ಥಕವಾಗುವುದರೊಂದಿಗೆ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗುವರು ಎಂದ ಅವರು ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರಂತೆಯೇ ನರ್ಸ್ಗಳಿಗೂ ಪ್ರಮುಖ ಸ್ಥಾನವಿದೆ ಎಂದರು.
ಶುಶ್ರೂಷಕಿಯರಾದ ಪವಿತ್ರ, ಗೀತಾ, ಪ್ರೇಮ, ಚಂದ್ರಕಲಾ, ಬಿ.ಹೆಚ್. ಮಂಜುಳಾ, ಲತಾ, ನರಸಮ್ಮ, ಸರಸ್ವತಿ, ಆಶಾಲತಾ, ಹೆಚ್. ಮಂಜುಳಾ, ಮಂಜುನಾಥ್, ಗೋವಿಂದರಾಜು, ಡಾ. ಜಯಂತ್ ಸೇರಿದಂತೆ ಇನ್ನಿತರರು ಹಾಜರಿದ್ದರು.