ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬೆಟ್ಟಿಂಗ್ ಬಲು ಜೋರು

Rashmi Kasaragodu
Updated On : 15 May 2014, 12:56 pm

ಕುಣಿಗಲ್: ಲೋಕಸಭೆ ಚುನಾವಣೆ ನಡೆದು ತಿಂಗಳೆ ಕಳೆದುಹೋಗಿದ್ದು, ಮತಎಣಿಕೆ ದಿನಾಂಕ ಹತ್ತಿರವಾಗಿರುತ್ತಿರುವಂತೆ, ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆ ಗೆಲ್ಲುವ ಅಭ್ಯರ್ಥಿ ಪರ ಬೆಟ್ಟಿಂಗ್ ಪ್ರಾರಂಭವಾಗಿದೆ.
ಕುಣಿಗಲ್ ತಾಲೂಕು ತುಮಕೂರು ಜಿಲ್ಲೆಯಲ್ಲೆ ಇದ್ದರೂ, ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರಕ್ಕೆ ಕೆಲ ಭಾಗಗಲು ಸೇರಿರುವ ಕಾರಣ, ತಾಲೂಕಿನಲ್ಲೂ ತುಮಕೂರು ಲೋಕಸಭೆ ಕ್ಷೇತ್ರದ ಗೆಲ್ಲುವ ಅಭ್ಯರ್ಥಿಗಳ ಮೇಲೂ ಬೆಟ್ಟಿಂಗ್ ಭರಾಟೆ ಜೋರಾಗಿ ನಡೆದಿದೆ.
ತಾಲೂಕಿನಲ್ಲಿ ಪ್ರಸಕ್ತ ಲೋಕಸಭೆ ಚುನಾವಣೆ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಗೆಲ್ಲುವುದು ಬಹುತೇಕ ಖಚಿತವಾಗಿರುವುದರಿಂದ, ಕಾಂಗ್ರೆಸ್ ಅಭ್ಯರ್ಥಿಯ ಗೆಲವಿಗೆ
ಬೆಟ್ಟಿಂಗ್ ಹಾಕಲು ಇತರೆ ಪಕ್ಷದವರು ಸೇರಿದಂತೆ ಯಾರೊಬ್ಬರು ಆಸಕ್ತಿ ತೋರುತ್ತಿಲ್ಲ. ಇನ್ನು, ತಾಲೂಕಿನಲ್ಲಿ ಎರಡನೆ ಸ್ಥಾನ ಜೆಡಿಎಸ್‌ಗೋ ಅಥವಾ ಬಿಜೆಪಿಗೋ ಎಂಬ ಬೆಟ್ಟಿಂಗ್ ಜೋರಾಗಿ ನಡೆಯುತ್ತಿದೆ. ಎರಡನೇ ಸ್ಥಾನ ಜೆಡಿಎಸ್ ಎಂದು ಜೆಡಿಎಸ್ ಪರ ಬೆಟ್ಟಿಂಗ್ ನಡೆಯುತ್ತಿದ್ದು, ಇದನ್ನು ಸವಾಲಾಗಿ ಸ್ವೀಕರಿಸಿರುವ ಬಿಜೆಪಿ ಕಡೆಯವರೂ ಎರಡನೇ ಸ್ಥಾನಕ್ಕೆ ಹೆಚ್ಚಿನ ಬೆಟ್ಟಂಗ್ ಕಟ್ಟಿದ್ದಾರೆ.
ಈ ಮಧ್ಯೆ ರಾಜ್ಯದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸುವ ಬಗ್ಗೆಯೂ ಬೆಟ್ಟಿಂಗ್ ಭರಾಟೆ ಜೋರಾಗಿದೆ. ರಾಜ್ಯದಲ್ಲಿ ಬಿಜೆಪಿ ಅತ್ಯಧಿಕ ಸ್ಥಾನದ ಬಗ್ಗೆ ಬೆಟ್ಟಿಂಗ್‌ದಾರರ ಫೇವರೇಟ್ ಆಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement