ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅರ್ಹ ಶಿಕ್ಷಕರಿಗೆ ಬಡ್ತಿ

Rashmi Kasaragodu
Updated On : 16 May 2014, 1:29 am

ಮಧುಗಿರಿ: ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ಮಧುಗಿರಿ ಉತ್ತರ ಶೈಕ್ಷಣಿಕ ಜಿಲ್ಲೆಯ  ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಿಇಡಿ ತರಬೇತಿ ಪಡೆದ ಸಹ ಶಿಕ್ಷಕರು ಮತ್ತು ಬಿಪಿಇಡಿ ತರಬೇತಿ ಪಡೆದ ದೈಹಿಕ ಶಿಕ್ಷಕರಲ್ಲಿ ಅರ್ಹ ಶಿಕ್ಷಕರುಗಳಿಗೆ ಬಡ್ತಿ ನೀಡಿ ಸ್ಥಳ ನಿಯುಕ್ತಿಗೊಳಿಸಿ ಡಿಡಿಪಿಐ
ಟಿ.ಎಸ್. ಆಂಜನಪ್ಪ ಸ್ಥಳದಲ್ಲೇ ಆದೇಶ ಪತ್ರ ನೀಡಿದರು. ಜಿಲ್ಲಾ ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷ ತಿಪ್ಪಯ್ಯ, ಜಿಲ್ಲಾ ಎಸಿ,್ಸ ಎಸ್ಟಿ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ರಾಮಣ್ಣ ಹಾಗೂ  ಪದಾಧಿಕಾರಿಗಳು ಉಪಸ್ಥಿತರಿದ್ದರು.


ವಾಸವಿ ಪ್ರೌಢಶಾಲೆಗೆ ಶೇ.100


ಶಿರಾ ನಗರದ ಶ್ರೀ ವಾಸವಿ ಪ್ರೌಢಶಾಲೆಯಲ್ಲಿ ಶೇ. 100 ರಷ್ಟು ಫಲಿತಾಂಶ ಪಡೆದಿದ್ದು ಈ ಶಾಲೆಯಲ್ಲಿ 72 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 21 ಉನ್ನತ ಶ್ರೇಣಿ, 39 ಪ್ರಥಮ ದರ್ಜೆ, ಉಳಿದ 8 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಉತ್ತಮ ಫಲಿತಾಂಶಕ್ಕೆ ಶ್ರಮಿಸಿದ ಶಾಲೆಯ ಸಿಬ್ಬಂದಿಯನ್ನು ಆಡಳಿತ ಮಂಡಳಿ ಅಭಿನಂದಿಸಿದೆ.ಶಸ್ತ್ರ ಚಿಕಿತ್ಸಾ ಶಿಬಿರ: ತಾಲೂಕಿನ ಕಳ್ಳಂಬೆಳ್ಳ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೇ 19 ಸೋಮವಾರದಂದು ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಡಾ. ಎಂ.ಸಿ ಮೋದಿ ಚಾರಿಟಬಲ್ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದು, ಈ ಶಿಬಿರದ ಪ್ರಯೋಜನವನ್ನು ಆಸಕ್ತರು ಪಡೆಯಬೇಕೆಂದು ಆಯೋಜಕರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement