ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅನಿಲ ಸೋರಿಕೆ: ತಾತ, ಮೊಮ್ಮಗಳಿಗೆ ಗಾಯ

Rashmi Kasaragodu
Updated On : 16 May 2014, 11:55 am

ಕುಣಿಗಲ್: ಅಡುಗೆ ಅನಿಲ ಸಿಲೆಂಡರ್‌ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ತಾತ, ಮೊಮ್ಮಗಳು ಸುಟ್ಟಗಾಯಗಳಾಗಿ ಪ್ರಾಣಾಪಾಯದಿಂದ ಪಾರಾದ ಘಟನೆ ಶುಕ್ರವಾರ ಪಟ್ಟಣದ 13ನೇ ವಾರ್ಡ್‌ನ ಮಹಾವೀರ ನಗರದಲ್ಲಿ ನಡೆದಿದೆ.
 ಮಹಾವೀರ ನಗರದಲ್ಲಿರುವ ಎಡೆಯೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ನಾರಾಯಣ ಎಂಬುವವರ, ಮನೆಯಲ್ಲಿ, ಬೆಳಗ್ಗೆ ಅವರ ಮಗಳಾದ ರಮ್ಯ ಎಂಬುವವರು ಅಡುಗೆ ಅನಿಲ ಸಿಲೆಂಡರ್ ಖಾಲಿಯಾದ ನಂತರ ಮತ್ತೊಂದು ಸಿಲೆಂಡರ್ ಹಾಕುವಂತೆ
ತಂದೆಯವರಿಗೆ ತಿಳಿಸಿದ್ದರಿಂದ, ನಾರಾಯಣ, ಖಾಲಿಯಾದ ಸಿಲೆಂಡರ್ ತೆಗೆದು, ಭರ್ತಿ ಸಿಲೆಂಡರ್ ಅಳವಡಿಸಿ, ಗ್ಯಾಸ್ ಒಲೆ ಹಚ್ಚಲು ಮುಂದಾದಾಗ ಅಡುಗೆ ಅನಿಲ ಸೋರಿಕೆಯಾಗಿ ದಿಢೀರ್ ಬೆಂಕಿಹೊತ್ತಿಕೊಂಡ ಪರಿಣಾಮ ಅವರ ಮುಖ, ಎದೆ, ಕೈಗೆ ಸುಟ್ಟಗಾಯಳಾದವು. ಈ ಸಂದರ್ಭದಲ್ಲಿ ಹತ್ತಿರದಲ್ಲೆ ಇದ್ದ ಮೊಮ್ಮಗಳಾದ ಭಾರ್ಗವಿ (6)ಗೂ ಮುಖ ಮತ್ತು ಕೈಗೆ ಸುಟ್ಟ ಗಾಯಗಳಾದವು.
  ಸಿಲೆಂಡರ್ ಹೊತ್ತಿ ಉರಿಯತೊಡಗಿದ್ದು, ನೆರೆಹೊರೆಯವರು ನೀರು ಹಾಕಿ ತಂಪು ಮಾಡಲೆತ್ನಿಸಿ, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ, ಬೆಂಕಿ ನಿಯಂತ್ರಿಸಿ, ಸಿಲೆಂಡರ್ ಹೊರಗೆ ತಂದು ಹೆಚ್ಚಿನ ಅನಾಹುತ ನಿಯಂತ್ರಿಸಿದರು.   
  ಸುಟ್ಟಗಾಯಗಳಿಂದ ಬಳಲಿದ ತಾತ, ಮೊಮ್ಮಗಳಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ತುಮಕೂರು ಸಾರ್ವಜನಿಕ ಆಸ್ಪತ್ರೆಗೆ ಕಳಿಸಲಾಯಿತು. ಸಿಲೆಂಡರ್‌ನಲ್ಲಿ ರಬ್ಬರ್ ವಾಷರ್ ತುಂಡಾದ್ದರಿಂದ ಅನಿಲ ಸೋರಿಕೆಯಾಗಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement