ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

32ಪೊಲೀಸ್ ವಸತಿ ಗೃಹಕ್ಕೆ ರು. 57 ಲಕ್ಷ ಮಂಜೂರು

Rashmi Kasaragodu
Updated On : 18 May 2014, 12:20 pm

ಕೊರಟಗೆರೆ: ತಾಲೂಕಿನಲ್ಲಿ ಪೊಲೀಸರಿಗೆ ಸುರಕ್ಷಿತ ಸೂರು ಕಲ್ಪಿಸುವುದಕ್ಕಾಗಿ ಗೃಹಮಂತ್ರಿಗಳಿಗೆ ಮನವಿ ಮಾಡಿದ್ದೆ. ಈ ಹಿನ್ನಲೆಯಲ್ಲಿ ಈಗ 32 ಪೊಲೀಸ್ ವಸತಿ ಗೃಹಕ್ಕೆ 57 ಲಕ್ಷ ರು. ಮಂಜೂರಾಗಿ ಕಾಮಗಾರಿ ಪ್ರಾರಂಭವಾಗಿರುವುದಾಗಿ ಶಾಸಕ ಪಿ.ಆರ್.  ಸುಧಾಕರ್ ಲಾಲ್ ತಿಳಿಸಿದರು. ಅವರು ಪೊಲೀಸ್ ವಸತಿ ಗೃಹ ದುರಸ್ಥಿ ಕಾಮಗಾರಿ ಪರಿಶೀಲಿಸಿ ಮಾತನಾಡಿ ನನ್ನ ಮನವಿಗೆ ಸರ್ಕಾರ ಸ್ಪಂದಿಸಿದೆ. ಈಗ ಕಾಮಗಾರಿಯನ್ನು ನಿರ್ಮಿತಿ ಕೇಂದ್ರ ನಿರ್ವಹಿಸುತ್ತಿದೆ. ಕಾಮಗಾರಿ ಪರಿಶೀಲ ಮಾಡಿದ್ದು ಮುಖ್ಯವಾಗಿ ವಸತಿ ಗೃಹಕ್ಕೆ ತುರ್ತಾಗಿ ಅವಶ್ಯವಿರುವಂತಹ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಿದ್ದೇನೆ. ಇದರಂತೆಯೇ ಕಾಮಗಾರಿ ಪ್ರಾರಂಭವಾಗಿದ್ದು ಕೆಲವೇ ದಿನಗಳಲ್ಲಿ ಪೊಲೀಸರಿಗೆ ಉತ್ತಮ ವಸತಿ ಗೃಹಗಳು ನಿರ್ಮಾಣವಾಗಲಿವೆ ಎಂದರು. ಶಾಸಕರೊಂದಿಗೆ ಜೆಡಿಎಸ್ ಕಾರ್ಯಾಧ್ಯಕ್ಷ ನರಸಿಂಹರಾಜು, ಮಾವತ್ತೂರು ಗ್ರಾ.ಪಂ ಅಧ್ಯಕ್ಷ, ಸಬ್ ಇನ್ಸ್‌ಪೆಕ್ಟರ್ ರವಿಕುಮಾರ್ ಸೇರಿದಂತೆ ಇತರೆ ಮುಖಂಡರುಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement