ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅಕ್ರಮ ಮದ್ಯಮಾರಾಟ ತಡೆಯಲು ಆಗ್ರಹ

Rashmi Kasaragodu
Updated On : 18 May 2014, 12:20 pm

ಚಿಕ್ಕನಾಯಕನಹಳ್ಳಿ: ತಾಲೂಕಿನ ಹೋಬಳಿ ಕೇಂದ್ರವಾದ ಶೆಟ್ಟೀಕೆರೆಯಲ್ಲಿ ಅಕ್ರಮ ಮದ್ಯಮಾರಾಟ ಮತ್ತು ಕಾನೂನು ಬಾಹಿರ ಜೂಜಾಟವನ್ನು ತಪ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಅವರು ಹೋಬಳಿ ಕೇಂದ್ರದಲ್ಲಿ ಮಿತಿಮೀರಿರುವ ಅಕ್ರಮ ಮದ್ಯಮಾರಾಟ ಮತ್ತು ಕಾನೂನು ಬಾಹಿರವಾಗಿ ಜೂಜಾಟ ನಿರ್ಭೀತವಾಗಿ ನಡೆಯುತ್ತಿದೆ ಎಂದು ಹೇಳಿದರು. ಇದರಿಂದ ಗ್ರಾಮದಲ್ಲಿ ಮತ್ತು ಸುತ್ತಮುತ್ತಲ ಹಳ್ಳಿಗಳಲ್ಲಿ ಕಳ್ಳತನ ಮತ್ತು ದರೋಡೆಗಳಂತಹ ಕೃತ್ಯಗಳ ಹೆಚ್ಚಳಕ್ಕೆ ಕಾರಣವಾಗಿದೆ. ಈ ಹಿಂದೆ ಬೆಳಗಿನ ಜಾವದಲ್ಲಿ ವಾಕಿಂಗ್ ಹೋದ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಅಪಹರಣ ಪ್ರಕರಣವನ್ನು ಇನ್ನು  ಜನಮರೆತಿಲ್ಲ. ಆದರೆ ಗ್ರಾಮದಲ್ಲಿ ನಡೆಯುತ್ತಿರುವ ಇಂತಹ ಚಟುವಟಿಕೆಗಳಿಂದ ದುರಭ್ಯಾಸಗಳಿಗೆ  ಬಲಿಯಾಗಿರುವ ದಾರಿತಪ್ಪಿದ ಜನ ಹಣಗಳಿಕೆಗಾಗಿ ಕಳ್ಳತನಕ್ಕಿಳಿಯುತ್ತಿದ್ದಾರೆ. ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವ ಮಂದಿ ಕಾನೂನಿನ ಕಣ್ಣಿಗೆ ಮಣ್ಣೆರಚುವ ದಾರಿಯನ್ನು ತುಂಬಾ ಬುದ್ಧಿವಂತಿಕೆಯಿಂದ ಮಾಡುತ್ತಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement