ಅಲ್ಪಸಂಖ್ಯಾತರ ಘಟಕದ ವಿಜಯೋತ್ಸವ
ಪಾವಗಡ: ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿದ ಹಿನ್ನಲೆಯಲ್ಲಿ ತಾ.ಅಲ್ಪಸಂಖ್ಯಾತರ ಘಟಕದ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು. ಈ ಕುರಿತು ಪಟ್ಟಣದ ಮುಸ್ಲಿಂ ಬೀದಿಯಲ್ಲಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ರಿಜ್ವಾನ್ವುಲ್ಲಾ ಮಾತನಾಡಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಚಂದ್ರಪ್ಪ ಅವರು ಅತ್ಯಧಿಕ ಮತಗಳಿಂದ ಜಯಗಳಿಸಿದ್ದು ಸಂತಸದ ಸಂಗತಿ ಎಂದರು.
ಈ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಇಲ್ಲಿನ ಅಲ್ಪಸಂಖ್ಯಾತರು ಒಂದಾಗಿ ಕಾಂಗ್ರೆಸ್ ಪರ ಮತಚಲಾಯಿಸಿ ಚಂದ್ರಪ್ಪ ಅವರ ಗೆಲವಿಗೆ ಸಹಕಾರ ನೀಡಿದ್ದರು. ತಾ.ಅಲ್ಪಸಂಖ್ಯಾತರು ಸೇರಿದಂತೆ ಚಂದ್ರಪ್ಪ ಅವರ ಪರ ಮತಚಲಾಯಿಸಿದ ಎಲ್ಲಾ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.ಇದೇ ಸಂದರ್ಭದಲ್ಲಿ ಮಾಜಿ ಸಚಿವ ವೆಂಕಟರಮಣಪ್ಪ, ಪಕ್ಷದ ತಾ.ಅಧ್ಯಕ್ಷ ಸುದೇಶ್ಬಾಬು, ತಾ.ಗ್ರಾಮಾಂತರ ಅಧ್ಯಕ್ಷ ಎಚ್.ವಿ.ವೆಂಕಟೇಶ್ ಯುವ ಘಟಕದ ಅದ್ಯಕ್ಷ ಮೈಲಾರರೆಡ್ಡಿ ಸೇರಿದಂತೆ ಪಕ್ಷದ ಎಲ್ಲಾ ಗಣ್ಯರು ಮತ್ತು ಕಾರ್ಯಕರ್ತರಿದ್ದರು.