ತುಮಕೂರಿಗೆ 20ಕ್ಕೆ ಬರಗೂರು
ಮೇ 20 ರಂದು ಸಂಜೆ 5-30 ಕ್ಕೆ ಸಿದ್ಧಗಂಗಾ ಬಾಲಕರ ಪಪೂ ಕಾಲೇಜಿನಲ್ಲಿ ಏರ್ಪಾಟಾಗಿರುವ ತುಮಕೂರಿನಲ್ಲಿ ಜ್ಞಾನಬುತ್ತಿ ಕೇಂದ್ರದ ವತಿಯಿಂದ ಏರ್ಪಾಟಾಗಿರುವ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಾಹಿತಿ, ನಾಡೋಜ ಬರಗೂರು ರಾಮಚಂದ್ರಪ್ಪ ಪಾಲ್ಗೊಳ್ಳಲ್ಲಿದ್ದಾರೆ. ಶಿರಾದ ಗಡಿನಾಡು ಜಾನಪದ ಸಂಪರ್ಕ ಕೇಂದ್ರದ ವತಿಯಿಂದ ಡಾ. ಚಿಕ್ಕಣ್ಣ ಎಣ್ಣೆಕಟ್ಟೆಯವರ ಹಿಮತಬ್ಬಿದ ನೇಪಾಳ, ಭಾರತೀಯ ಸಂಸ್ಕೃತಿ ಜೈನ ಭಾರತ ಕಥಾ ಪರಂಪರೆಯ ತುರಗೋಳ್ ಜಾನಪದ ಮತ್ತು ಸಂಸ್ಕೃತಿ ಸಂಪುಟ ಪುಸ್ತಕಗಳನ್ನು ಬರಗೂರು ರಾಮಚಂದ್ರಪ್ಪ ಬಿಡುಗಡೆ ಮಾಡಲಿದ್ದಾರೆ. ಸಮಾರಂಭವನ್ನು ತುಮಕೂರು ವಿವಿ ಕುಲಪತಿ ಡಾ.ಎ.ಎಚ್. ರಾಜಾಸಾಬ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಡಾ.ಎಸ್.ಪಿ. ಪದ್ಮಪ್ರಸಾದ್ ವಹಿಸಲಿದ್ದಾರೆ. ತುಮಕೂರು ವಿವಿ ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್ ಪುಸ್ತಕ ಪರಿಚಯ ಮಾಡಲಿದ್ದಾರೆ. ಡಾ. ಲಕ್ಷ್ಮಣದಾಸ್, ಪಿ. ಶಾಂತಿಲಾಲ್, ಟಿ. ಮುರಳೀಕೃಷ್ಣ, ಈಶ್ವರಯ್ಯ ಪಾಲ್ಗೊಳ್ಳಲ್ಲಿದ್ದಾರೆ.