ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಧಾರ್ಮಿಕ ಮೌಲ್ಯ ಅಳವಡಿಸಿಕೊಳ್ಳಿ'

Rashmi Kasaragodu
Updated On : 18 May 2014, 12:22 pm

ತುಮಕೂರು: ಮಾನವ ತನ್ನ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಲು ಧಾರ್ಮಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಬಸವ ಧರ್ಮ ಪ್ರಮುಖ ಪಾತ್ರ ವಹಿಸುತ್ತದೆ. ಇದು ಬದುಕನ್ನು ಹಸನಾಗಿನುವ ಶ್ರೇಷ್ಠ ಧರ್ಮವೆಂದು ನಾಗವಲ್ಲಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಸಾಯನಶಾಸ್ತ್ರ ಉಪನ್ಯಾಸಕ ಎ. ಸುರೇಶ್ ಹೇಳಿದರು.
ಅವರು ಹೆಗ್ಗೆರೆಯ ವಿರಶೈವ ಸಮಾಜ ಹಾಗೂ ಶರಣ ಸಾಹಿತ್ಯ ವತಿಯಿಂದ ಏರ್ಪಡಿಸಿದ್ದ ಬಸವ ಜಯಂತಿ ಸಮಾರಂಭದಲ್ಲಿ ಬಸವ ಜಯಂತಿ ಮತ್ತು ಬಸವ ಧರ್ಮ ವಿಷಯವಾಗಿ ಕುರಿತು ಮಾತನಾಡುತ್ತಿದ್ದರು.
ಬಸವ ಧರ್ಮ ದೇವರ ಅಸ್ತಿತ್ವವನ್ನು ವೈಚಾರಿಕವಾಗಿ ತಿಳಿಸುತ್ತದೆ. ಅದು ಕಾಯಕ ದಾಸೋಹಗಳ ಮೂಲಕ ಸಾದಾಚರದ ಮಾರ್ಗವನ್ನು ತೋರಿದೆ. ಜಾತಿ, ವರ್ಣ, ವರ್ಗ, ಅಗಬೇದಗಳನ್ನು ನಿರಾಕರಿಸಿ ಸರ್ವ ಸಮಾನತೆಯನ್ನು ಸಾರಿದೆ. ಅಸ್ಪೃಶ್ಯತೆ, ಮೂಡನಂಬಿಕೆ, ಶೋಷಣೆ, ಇತ್ಯಾದಿ ಅನಿಷ್ಟಗಳನ್ನು ತೊಡೆದು ಹಾಕಿದೆ ಎಂದು ಹೇಳಿದ ಅವರು ವ್ಯಕ್ತಿಗಿಂತ ಸಮಾಜ ದೊಡ್ಡದು. ವ್ಯಕ್ತಿಗಿಂತ ಸಮಷ್ಟಿ ದೊಡ್ಡದು ಎಂದು ಸಾರಿ, ಇದು  ತ್ಯಾಗ ಪೂರ್ಣ ಮಾನೋಭಾವದ ಸೇವೆಯನ್ನು ಕಲಿಸುತ್ತದೆ ಎಂದುಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕುಂ. ಸಿ. ಸದಾಶಿವಯ್ಯನವರು ವಚನಗಳಲ್ಲಿ ಆರೋಗ್ಯವನ್ನು ಕುರಿತು ಮಾತನಾಡಿದರು. ಜಿ.ಎಸ್.ಎಸ್. ಮೂರ್ತಿ, ಗರುಸಿದ್ದಯ್ಯ, ಶಿವಕುಮಾರಯ್ಯ, ಮಿಮಿಕ್ರಿ ಈಶ್ವರಯ್ಯ, ಚಿಕ್ಕಬೆಳ್ಳಾವಿ ಶಿವಕುಮಾರ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement