ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬೆಂಗಳೂರಿನ ವ್ಯಕ್ತಿ ಅಸ್ತೂರಿನಲ್ಲಿ ಮರಕ್ಕೆ ನೇಣು

Rashmi Kasaragodu
Updated On : 18 May 2014, 12:55 pm

ಹನೂರು: ಬೆಂಗಳೂರಿನ ನಿವಾಸಿಯೊಬ್ಬರು ಸನಿಹದ ಅಸ್ತೂರು ಗ್ರಾಮದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ನಿವಾಸಿ ವಿಜಯೇಂದ್ರ (44) ಎನ್ನುವವರು ಆತ್ಮಹತ್ಯೆ ಮಾಡಿಕೊಂಡವರು. ಪೊನ್ನಾಚಿ ಮತ್ತು ಅಸ್ತೂರು ಗ್ರಾಮ ಮಾರ್ಗ ಮಧ್ಯದಲ್ಲಿನ ಮರಕ್ಕೆ ವಿಜಯೇಂದ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ವಿಜಯೇಂದ್ರ ಹಾಗೂ ಪತ್ನಿ ವೀರಬಸಮ್ಮ ಬೆಂಗಳೂರಿನ ಖಾಸಗಿ ಬಟ್ಟೆ ಫ್ಯಾಕ್ಟರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕುಟುಂಬ ಕಲಹದಿಂದ ಪತ್ನಿ ವೀರಬಸಮ್ಮ ಅಸ್ತೂರು ಗ್ರಾಮದಲ್ಲಿದ್ದರು. ಪತ್ನಿ ನೋಡಲು ಬೆಂಗಳೂರಿನಿಂದ ಬಂದಿದ್ದ ಪತಿ  ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ವೃತ್ತನಿರೀಕ್ಷಕ ಮರಿಶೆಟ್ಟಿ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement