ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಿದ್ಯಾರ್ಥಿ ಪ್ರಾಜೆಕ್ಟ್ ಮೌಲ್ಯನಿರ್ಧಾರಣ ಕಾರ್ಯಕ್ರಮ

Rashmi Kasaragodu
Updated On : 18 May 2014, 12:23 pm

ತುಮಕೂರು: ತುಮಕೂರಿನ ಪ್ರತಿಷ್ಠಿತ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿಯ 37ನೇ ವಿದ್ಯಾರ್ಥಿ ಪ್ರಾಜೆಕ್ಟ್ ಮೌಲ್ಯನಿರ್ಧಾರಣ ಕಾರ್ಯಕ್ರಮ  ನಡೆಯಿತು. ಈ ಮೌಲ್ಯನಿರ್ಧಾರಣ ಕಾರ್ಯಕ್ರಮಕ್ಕೆ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಎಲೆಕ್ಟ್ರಾನಿಕ್ಸ್ ಮತ್ತು ಸಿಸ್ಟಮ್ಸ್ ವಿಭಾಗದ ತಜ್ಞ ಡಾ. ಚಲಪತಿರಾವ್, ಕೆ.ಎಸ್.ಸಿ.ಎಸ್.ಟಿ, ಬೆಂಗಳೂರಿನ ಗೌರವ ಸದಸ್ಯ ಪ್ರೊ. ಶ್ರೀಕಂಠೇಶ್ವರ್, ಪ್ರೊ. ಕೆ.ಎನ್. ವೆಂಕಟೇಶ್ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಈ ಸಮಾರಂಭದಲ್ಲಿ ಮಾತನಾಡಿದ ಡಾ. ಚಲಪತಿರಾವ್ ರವರು, ಇಂದಿನ ಶಿಕ್ಷಣ ಪದ್ದತಿಗೂ, 80 ರ ದಶಕದ ಪದ್ಧತಿಗೂ ಇರುವ ವ್ಯತ್ಯಾಸವನ್ನು ತಿಳಿಸುತ್ತ, ಇಂದಿನ ತಾಂತ್ರಿಕ ಶಿಕ್ಷಣ ಪದ್ಧತಿಯಲ್ಲಿ ಪ್ರಯೋಗಗಳಿಗೆ ಒತ್ತು ನೀಡಿದರು. ನಿಜ ಜೀವನಕ್ಕೆ ಹೊಂದುವಂತಹ ಪ್ರಯೋಗಗಳು ನಡೆಯುತ್ತಿಲ್ಲ ಎಂದು ತಿಳಿಸಿದರು. ಈ ಮೌಲ್ಯನಿರ್ಧಾರಣ ಕಾರ್ಯಕ್ರಮದಲ್ಲಿ ಆಯ್ಕೆಯಾದ ಪ್ರಾಜೆಕ್ಟ್‌ಗಳಿಗೆ ಕರ್ನಾಟಕ ರಾಜ್ಯ ವಿಜ್ಞಾನ  ಮತ್ತು ತಂತ್ರವಿದ್ಯಾ ಮಂಡಳಿಯಿಂದ ಪ್ರಾಯೋಜತ್ವ ದೊರೆಯಲಿದ್ದು, ಈ ಪ್ರಾಯೋಜತ್ವದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಾಲೇಜಿನ ನಿರ್ದೇಶಕ ಡಾ. ಡಿ.ಎಸ್. ಸುರೇಶ್ ಕುಮಾರ್ ರವರು ತಿಳಿಸಿದರು. ಈ ಪ್ರಾಯೋಜಿತ್ವ ಮೌಲ್ಯನಿಧಾರಣ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆಯ 6 ಎಂಜಿನಿಯರಿಂಗ್ ಕಾಲೇಜುಗಳ 65 ವಿದ್ಯಾರ್ಥಿಗಳು ಸಿದ್ಧಪಡಿಸಿರುವ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದ 4ಪ್ರಾಜೆಕ್ಟ್‌ಗಳು ಸೇರಿದಂತೆ, ಒಟ್ಟು 15 ಪ್ರಾಜೆಕ್ಟ್‌ಗಳ ಪ್ರದರ್ಶನ ಮತ್ತು ಪ್ರಾಯೋಜಿತ್ವ ಮೌಲ್ಯ ನಿರ್ಧಾರಣ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement