ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸ್ವಪ್ರಯತ್ನದಿಂದ ಉಜ್ವಲ ಭವಿಷ್ಯ ನಿರ್ಮಾಣ

Rashmi Kasaragodu
Updated On : 18 May 2014, 12:22 pm

ತುಮಕೂರು: ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸ್ವಪ್ರಯತ್ನದಿಂದ ಆವಿಷ್ಕಾರ ನಡೆಸಿ ಹೊಸತನ್ನು ಕಂಡುಹಿಡಿಯುವ ಕಲೆ ರೂಢಿಸಿಕೊಳ್ಳಿ. ಆಗ ಸಂಶೋಧನಾ ಪ್ರತಿಭೆಗಳಿಗೆ ಮಾರುಕಟ್ಟೆಯಲ್ಲಿ ಉದ್ಯೋಗಗಳು ಅರಸಿ ಬರುತ್ತವೆ ಎಂದು ರಾಜ್ಯ ಕೈಗಾರಿಕಾ ಹಾಗೂ ವಾಣಿಜ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕ ಅಬ್ದುಲ್ ಅಜೀಜ್ ಕಿವಿಮಾತು ಹೇಳಿದರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಜ್ಯ ಮಟ್ಟದ ಎರಡು ದಿನಗಳ ಪ್ರಾಜೆಕ್ಟ್ ಎಕ್ಸಿಬ್ಯೂಷನ್ ಕಮ್ ಕಾಂಪಿಟೇಷನ್ ಪ್ರೋಗ್ರಾಂ, ಟೆಕ್ನೋಡಿಯ-2014 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹೆಚ್ಚು ಪ್ರಯತ್ನದಿಂದ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಹೊಸದನ್ನು ಕಂಡು ಹಿಡಿಯುವುದನ್ನು ಈಗಲೇ ರೂಢಿ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಆವಿಷ್ಕಾರದ ಮೂಲಕ ನೀವು ಮಾಡುವ ಸಂಶೋಧನೆಯ ಫಲದಿಂದ ನಿಮಗೆ ಉದ್ಯೋಗಗಳ ದೊರೆಯುತ್ತವೆ. ಇಂತಹ ಕಲೆಗಳಿಗೆ ಉತ್ತಮ ಪ್ರೋತ್ಸಾಹ ದೊರೆಯುತ್ತದೆ. ಪ್ರತಿಭೆಗೆ ತಕ್ಕ ಸ್ಥಾನ ದೊರೆತು, ಉಜ್ವಲ ಭವಿಷ್ಯ ನಿರ್ಮಾಣವಾಗುತ್ತದೆ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸಂಶೋಧನೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವ ವಿದ್ಯಾರ್ಥಿಗಳು ಉದ್ಯೋಗಕ್ಕೆ  ಹೋಗಲು
ಇಚ್ಛೆಯಿಲ್ಲದಿದ್ದರೆ  ಸ್ವಪ್ರಯತ್ನದಿಂದ ಕಂಪನಿ ಆರಂಭಿಸಿ ಆ ಮೂಲಕವಾದರೂ ಇತರೆ ನಿರುದ್ಯೋಗಿಗಳಿಗೆ  ಕೆಲಸ ಸೃಷ್ಟಿಸಿ, ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಸಹಕಾರಿಯಾಗಬಹುದು ಎಂದು ಅಬ್ದುಲ್ ಅಜೀಜ್ ಹೇಳಿದರು.
ಶ್ರೀ ಸಿದ್ಧಾರ್ಥ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ.ಕೆ.ಎ. ಕೃಷ್ಣಮೂರ್ತಿ ಮಾತನಾಡಿ, ಸ್ವಪ್ರಯತ್ನದಿಂದ ಉತ್ತಮ ತಂತ್ರಜ್ಞಾನ ಆವಿಷ್ಕಾರಕ್ಕೆ ಮುಂದಾದರೆ ಮುಂದಿನ ದಿನಗಳಲ್ಲಿ ನಿಮ್ಮ ಭವಿಷ್ಯ ತುಂಬಾ ಚೆನ್ನಾಗಿರುತ್ತದೆ. ನೀವು ದಿನನಿತ್ಯವೂ ಆವಿಷ್ಕಾರದಲ್ಲಿ ತೊಡಗಿ ಎಂದಿಗೂ ಪ್ರಯತ್ನ ನಿಲ್ಲಿಸದಿರಿ. ಆಗಲೇ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.  
ಈ ಕಾರ್ಯಕ್ರಮದಲ್ಲಿ ಸಿದ್ಧಾರ್ಥ ಮಹಾವಿದ್ಯಾಲಯದ ಡೀನ್ ಡಾ. ಎಂ.ಝಡ್. ಕುರಿಯನ್, ಸ್ಟೆಪ್ ವಿಭಾಗದ ನಿರ್ದೇಶಕ ಹಾಗೂ ಟೆಕ್ನೋಡಿಯಾ-2014 ಸಂಯೋ ಜಕ  ಡಾ.ಸಂಜೀವ್ ಕುಮಾರ್, ಉಪನ್ಯಾಸಕರಾದ ಚಿದಾನಂದ್ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಟೆಕ್ನೋಡಿಯೋ-2014 ದಲ್ಲಿ ರಾಜ್ಯದ 10 ಕ್ಕೂ ಹೆಚ್ಚು ಕಾಲೇಜುಗಳಿಂದ 50 ಪ್ರಾಜೆಕ್ಟ್‌ಗಳು ಸ್ವರ್ಧೆಯಲ್ಲಿ ಪ್ರದರ್ಶನಗೊಂಡಿವೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ತರಗತಿಯಲ್ಲಿ ತಯಾರಿಸಿದ ಪ್ರಾಜೆಕ್ಟ್‌ಟ್‌ಗಳನ್ನು ಪ್ರದರ್ಶಿಸಲು ವಿಶಾಲ ವೇದಿಕೆಯನ್ನು ಕಲ್ಪಿಸಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement