ಪಠ್ಯೇತರ ಚಟುವಟಿಕೆ ಮುಖ್ಯ: ವಿಶ್ವನಾಥ್
ಕ.ಪ್ರ.ವಾರ್ತೆ ್ಣ ಕೊರಟಗೆರೆ ್ಣ ಮೇ 23
ಮಕ್ಕಳಲ್ಲಿ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸಲು ಪಠ್ಯ ಪುಸ್ತಕಗಳ ಜತೆಗೆ ಆಟ ಪಾಠಗಳ ಮೂಲಕ ಪಠ್ಯೇತರ ವಿಷಯಗಳನ್ನು ಕಲಿಸುವಲ್ಲಿ ಬೇಸಿಗೆ ಶಿಬರಗಳು ಉಪಯುಕ್ತ ಎಂದು ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ತಿಳಿಸಿದರು.
ಅವರು ತಾಲೂಕಿನ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತುಬೆಂಗಳೂರು ಬಾಲ ಭವನ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ 10 ದಿನಗಳ ಬೇಸಗೆ ಶಿಬಿರ ಮುಕ್ತಾಯ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಹತ್ತು ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ಮಕ್ಕಳು ಬೇಸಿಗೆ ರಜಾ ದಿನಗಳಲ್ಲಿ ಬಿಸಿಲಿನಲ್ಲಿ ಓಡಾಡಿ ಆರೋಗ್ಯ ಹದಗೆಡಿಸಿಕೊಳ್ಳದೆ ಬೇರೆ-ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಬದಲು ಶಿಬಿರದಲ್ಲಿ ಭಾಗವಹಸಿ ಪಠ್ಯೇತರ ಚಟುವಟಿಕೆಗಳಾದ ಮಣ್ಣಿನಿಂದ ಮಾಡುವ ಆಟಿಕೆಗಳು, ಕಾಗದ ಕಲೆ, ಚಿತ್ರಕಲೆ, ಯೋಗಾಸನ, ಸಾಮೂಹಿಕ, ನೃತ್ಯ, ಸಂಗೀತ, ಜಾನಪದ ಗೀತೆಗಳು ಸೇರಿದಂತೆ ಮುಂತಾದವುಗಳನ್ನು ಶ್ರದ್ಧೆಯಿಂದ ಕಲಿಯುವುದರಿಂದ ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ಪಠ್ಯಾಭ್ಯಾಸ ಮಾಡಲು ಅನುಕೂಲವಾಗುತ್ತದೆ ಎಂದರು.
ಆರೋಗ್ಯ ಇಲಾಖೆಯ ಮದ್ಲೇರಪ್ಪ, ಡಾ.ಭವ್ಯ ಇತರರು ಇದ್ದರು.