ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಶಿಕ್ಷಕರ ಸಂಘದ ನೌಕರರ ಬೇಡಿಕೆ ಈಡೇರಿಸಿ

Mainashree
Updated On : 23 May 2014, 10:13 am

ಕ,ಪ್ರ,ವಾರ್ತೆ ಮಧುಗಿರಿ ಮೇ 23
ಕರ್ನಾಟಕ ರಾಜ್ಯ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ನೌಕರರ  ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಧುಗಿರಿ ಶಾಖೆ ಜಿಲ್ಲಾ ಸಂಘದ ಅಧ್ಯಕ್ಷ ಎಂ.ಎನ್. ನರಸಿಂಹಮೂರ್ತಿ ಶಿಕ್ಷಣ ಸಚಿವ ಕಿಮ್ಮನೆರತ್ನಾಕರ ಅವರಿಗೆ ಮನವಿ ಅರ್ಪಿಸಿದರು.
ರಾಜ್ಯದಲ್ಲಿ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ಸುಮಾರು 18 ಸಾವಿರ ಮಂದಿ ಶಿಕ್ಷಕರು ಸರ್ಕಾರಿ ಪ್ರಾಥಮಿಕ  ಶಾಲಾ ವೃಂದದಿಂದ ಪ್ರೌಢಶಾಲೆ ವೃಂದಕ್ಕೆ ಜೇಷ್ಠತಾ ನಿಯಮನುಸಾರ ಬಡ್ತಿ ಪಡೆದರೂ ಕೂಡ ಹಲವು ಸಮಸ್ಯೆಗಳು ಶಿಕ್ಷಕರನ್ನು ಕಾಡುತ್ತಿವೆ ಎಂದು ಮನವಿಯಲ್ಲಿ  ದೂರಿದ್ದಾರೆ.
ಬಡ್ತಿ ಪಡೆದ ನಂತರ ಕಾಲ ಮಿತಿ ಬಡ್ತಿಗಳಿಂದ ವಂಚಿತರಾಗಿದ್ದು ವರ್ಗಾವಣೆಯಲ್ಲಿ ಪ್ರಾಥಮಿಕ ವೃಂದದ ಸೇವೆ ಪರಿಗಣಿಸದೇ ಕೈ ಬಿಟ್ಟಿದ್ದಾರೆ. ಪ್ರೌಢಶಾಲಾ ಮುಖ್ಯ ಶಿಕ್ಷಕರ ಬಡ್ತಿ ವಿಚಾರದಲ್ಲಿ ಶೇ.75 ಅನುಪಾತದಲ್ಲಿ ಪ್ರಾಥಮಿಕದಿಂದ ಬಡ್ತಿ ಹೊಂದಿದವರಿಗೆ ಕನಿಷ್ಠ ಮೀಸಲಾತಿ ನೀಡಿಲ್ಲ, ಬಡ್ತಿ ಕೌನ್ಸೆಲಿಂಗ್ ಸಮಯದಲ್ಲಿ ಸಿ ವಲಯಕ್ಕೆ ಹುದ್ದೆ ನೀಡುತ್ತಿರುವ ಸಮಸ್ಯೆ  ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ನೌಕರರ ಬೇಡಿಕೆಗಳನ್ನು ಕಾಡುತ್ತಿದ್ದು ಅವುಗಳನ್ನು ಶಿಕ್ಷಣ ಸಚಿವರು  ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ಅಧ್ಯಕ್ಷ ಎಂ.ಎನ್.ನರಸಿಂಹಮೂರ್ತಿ  ಮನವಿ ಅರ್ಪಿಸಿದರು. ಸಂಘದ ಪದಾಧಿಕಾರಿಗಳಾದ ರಂಗನಾಥ್, ರಂಗಧಾಮಯ್ಯ, ರೆಡ್ಡಿ ಅನೇಖರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement