ಅತ್ಯಧಿಕ ಮತಗಳಿಂದ ಗೆಲ್ಲುವೆ: ಶಿವಯೋಗಿಸ್ವಾವು
ಪಾವಗಡ: ರಾಜ್ಯದಲ್ಲಿ ಬಿಜೆಪಿ ಅಲೆ ಇದ್ದು ಪದವೀಧರರ ಕ್ರೇತ್ರದಲ್ಲಿ ತಾವು ಮಾಡಿದ ಸೇವೆಯಿಂದ ಮುಂದಿನ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಗೆಲ್ಲುವ ವಿಶ್ವಾಸ ಇದೆ ಎಂದು ಆಗ್ನೇಯ ಪದವೀಧರರ ಕ್ಷೇತ್ರದ ಎಂಎಲ್‌ಸಿ ಡಾ.ಶಿವಯೋಗಿಸ್ವಾವು ಅವರು ಅಭಿಪ್ರಾಯಪಟ್ಟರು. ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನಲೆಯಲ್ಲಿ ಸೋಮವಾರ ಪಾವಗಡಕ್ಕೆ ಆಗಮಿಸಿದ್ದ ಎಂಎಲ್‌ಸಿ ಡಾ.ಶಿವಯೋಗಿಸ್ವಾವು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ ನಂತರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.