ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕೊಳವೆ ಬಾವಿ ಕೊರೆಯಲು ಚಾಲನೆ: ಶಾಸಕ

Mainashree
Updated On : 27 May 2014, 11:23 am

ಕೊರಟಗೆರೆ: ಪಟ್ಟಣದ ಕುಡಿಯುವ ನೀರಿನ ವ್ಯವಸ್ಥೆ ನಿವಾರಣೆಗಾಗಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ 4 ಮತ್ತು ಎಸ್.ಎಫ್.ಸಿ.ಯೋಜನೆಯಡಿ 18 ಸೇರಿದಂತೆ ಒಟ್ಟು 22 ನೂತನ ಕೊಳವೆ ಬಾವಿಗಳು ಮಂಜೂರಾಗಿ ಕೊಳವೆ ಬಾವಿ ಕೊರೆಯಲು ಚಾಲನೆ ನೀಡುತ್ತಿರುವುದಾಗಿ ಶಾಸಕ ಪಿ.ಆರ್. ಸುಧಾಕರಲಾಲ್ ತಿಳಿಸಿದರು.
ಪಟ್ಟಣದ ಗುಂಡಾಂಜನೇಯ ಬಡಾವಣೆಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸ್ಲಂಗಳಲ್ಲಿ ವಾಸವಿರುವ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು 30 ಲಕ್ಷ ರು. ವೆಚ್ಚದಲ್ಲಿ 4  ಕೊಳವೆ ಬಾವಿ ಕೊರೆಸಲು, ಪೈಪ್ ಲೈನ್ ಹಾಗೂ ಪಂಪ್ ಮೋಟರ್ ಅಳವಡಿಸಲು ಮಂಜೂರಾಗಿದ್ದು ಅದರಲ್ಲಿ ಕೊಳವೆಬಾವಿಗಳನ್ನು ಕೊರೆಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಎಸ್.ಎಫ್.ಸಿ ಯೋಜನೆಯಡಿ 18 ಕೊಳವೆ ಬಾವಿ ಕೊರೆಸಲು 50 ಲಕ್ಷ ರು. ಅನುದಾನ ಬಿಡುಗಡೆಯಾಗಿದ್ದೂ ಕುಡಿಯುವ ನೀರಿನ ಸಮಸ್ಯೆ ಇರುವ ವಾರ್ಡುಗಳಲ್ಲಿ ಸ್ಥಳ ಗುರುತಿಸಿ 18 ಕೊಳವೆ ಬಾವಿಗಳು ಕೊರೆಸಲು ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಿ ಶೀಘ್ರದಲ್ಲಿಯೆ ಪಟ್ಟಣದಲ್ಲಿ ಕೊಳವೆ ಬಾವಿಗಳನ್ನು ಕೊರಸಿ ಕುಡಿಯವ ನೀರಿನ ಸಮಸ್ಯೆ ಪರಿಹಸುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement