ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ದೊಡ್ಡಕೆರೆಗೆ ಭೇಟಿ: ಮೀನಿನ ಸಾವಿನ ಕುರಿತು ಪರಿಶೀಲನೆ

Mainashree
Updated On : 27 May 2014, 11:24 am

ಕ.ಪ್ರ.ವಾರ್ತೆ ್ಣ ಕುಣಿಗಲ್ ್ಣ ಮೇ 27
ಪಟ್ಟಣಕ್ಕೆ ಪ್ರಮುಖ ಕುಡಿಯುವ ನೀರು ಪೂರೈಕೆ ತಾಣವಾದ ದೊಡ್ಡಕೆರೆಯಲ್ಲಿ ಭಾನುವಾರ ಮೀನುಗಳು ಸತ್ತು ತೇಲುತ್ತಿದ್ದ ಹಿನ್ನೆಲೆಯಲ್ಲಿ ಮೀನುಗಾರಿಕೆ ಇಲಾಖೆ, ಆರೋಗ್ಯ ಇಲಾಖಾಧಿಕಾರಿ ಮತ್ತು ಉಫವಿಭಾಗಾಧಿಕಾರಿ, ಪುರಸಭಾಧ್ಯಕ್ಷರ ನೇತೃತ್ವದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸೋಮವಾರ ಬೆಳಗ್ಗೆ ಅಧಿಕಾರಿಗಳು ಭೇಟಿ ನೀಡಿದಾಗ, ಕೆರೆಯಲ್ಲಿ ಭಾನುವಾರ ಮಧ್ಯಾಹ್ನವೇ ಸತ್ತ ಮೀನುಗಳನ್ನು ಕೆರೆಯಲ್ಲಿ ಗುತ್ತಿಗೆ ಪಡೆದಂತಹವರು ಮತ್ತು ಪುರಸಭೆ ಸಿಬ್ಬಂದಿಗಳು ಕೆರೆ ನೀರು ಕಲುಶಿತಗೊಳ್ಳುವ
ಹಿನ್ನೆಲೆಯಲ್ಲಿ ತೆರವುಗೊಳಿಸಿದ್ದರಿಂದ, ಕೆರೆದಂಡೆ ಸ್ವಚ್ಛವಾಗಿಯೇ ಕಾಣುತ್ತಿದ್ದು, ಭೀಕರತೆ ಕಾಣಲಿಲ್ಲ. ಮೀನುಗಾರಿಕೆ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕಿ ಕಾವ್ಯ, ದಿನದಿಂದ ದಿನಕ್ಕೆ ಬಿಸಲಿನ ತಾಪ ಹೆಚ್ಚಾಗುತ್ತಿದ್ದು, ಅಧಿಕ ಬಿಸಿಲು ಮತ್ತು ಕೆರೆಯ ನೀರಿನಲ್ಲಿ ಆಮ್ಲಜನಕದ ಕೊರತೆ ಪರಿಣಾಮ ಕೆರೆಯಲ್ಲಿನ ಕೇವಲ ಒಂದು ಜಾತಿಯ ಸಣ್ಣ ಮೀನುಗಳು ಮಾತ್ರ ಮೃತಪಟ್ಟಿವೆ. ಮತ್ತೇನು ಹೆಚ್ಚಿನ ಪ್ರಮಾಣದ ಹಾನಿ ಸಂಭವಿಸಿಲ್ಲ ಎಂದರು.
ಅಸಮಾಧಾನ: ಪುರಸಭಾಧ್ಯಕ್ಷ ಕೆ.ಎಲ್.ಹರೀಶ್, ಮೀನುಗಾರಿಕೆ ಇಲಾಖಾಧಿಕಾರಿಯ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಚಿಕ್ಕಕೆರೆಯ ಗುಂಡಿಯಲ್ಲಿ ವ್ಯಕ್ತಿಯೊಬ್ಬರು ಮೀನುಸಾಕಿದ್ದು, ಅಲ್ಲಿ ನೀರು ಕಡಿಮೆಯಾಗಿ, ಕಲುಶಿತಗೊಂಡಿದ್ದರಿಂದ ಮೀನುಗಳು ಸಾಯುತ್ತವೆ ಎಂಬ ಭಯದಿಂದ ಆ ವ್ಯಕ್ತಿ, ಚಿಕ್ಕಕೆರೆಯ ಮೀನುಗಳನ್ನು ತಂದು ದೊಡ್ಡಕೆರೆಯಲ್ಲಿ ನಿಯಮಬಾಹಿರವಾಗಿ ಬಿಟ್ಟಿದ್ದಾರೆ. ನೀರಿನ ಮತ್ತು ವಾತಾವರಣ ವ್ಯತ್ಯಾಸದಿಂದ ಮೀನುಗಳು ಸತ್ತಿವೆ.  ವಿನಾಕಾರಣ ತಪ್ಪು ಉತ್ತರ ನೀಡಿ ದಾರಿತಪ್ಪಿಸದಂತೆ ತಾಕೀತು ಮಾಡಿದರಲ್ಲದೆ, ದೊಡ್ಡಕೆರೆಯ ನೀರನ್ನು ಸಾವಿರಾರು ಜನತೆ ಕುಡಿಯಲು ಬಳಸುತ್ತಿದ್ದಾರೆ. ಕುಡಿಯುವ ನೀರು ಪೂರೈಕೆ ವಿಷಯದಲ್ಲಿ ನಿಮ್ಮ ಇಲಾಖೆ  ಬೇಜವಾಬ್ದಾರಿಯಿಂದ, ಕೆರೆಯಲ್ಲಿ ಮೀನು ಸತ್ತು ಕುಡಿಯುವ ನೀರಿನ ಜಲಮೂಲ ಹಾಳಾಗುತ್ತಿದೆ. ಪಟ್ಟಣದಲ್ಲಿ ನೀರಿನಂದ ಸಾಂಕ್ರಾಮಿಕ ರೋಗ ಸಂಭವಿಸಿದಲ್ಲಿ ನಿಮ್ಮ ವಿರುದ್ಧವೆ ಕ್ರಮಕ್ಕೆ ಶಿಫಾರಸು ಮಾಡಬೇಕಾಗುತ್ತೆ ಎಂದು ಎಚ್ಚರಿಸಿದರು.
ಗಮನಕ್ಕೆ ಬಂದಿಲ್ಲ: ಕಸಿವಿಸಿಗೊಂಡ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಕಾವ್ಯ, ಸದರಿ ವಿಷಯ ತಮ್ಮ ಗಮನಕ್ಕೆ ಬಾರದ ಕಾರಣ ಅಚಾತುರ್ಯ ಸಂಭವಿಸಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement