ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನೀರಿಗೆ ಸಬೂಬು ಹೇಳದೆ ಕ್ರಿಯಾಯೋಜನೆ ರೂಪಿಸಿ

Mainashree
Updated On : 27 May 2014, 11:24 am

ಕ.ಪ್ರ.ವಾರ್ತೆ ್ಣ ಚಿಕ್ಕನಾಯಕನಹಳ್ಳಿ ್ಣ ಮೇ 27
ತಾಲೂಕಿನ ಕುಡಿಯುವ ನೀರಿನ ಕ್ರಿಯಾಯೋಜನೆ ತಯಾರಿಸುವಾಗ ಬರೀ ಜನಸಂಖ್ಯೆ ಆಧರಿಸಿ  ತಯಾರಿಸದೆ, ಜಾನುವಾರುಗಳನ್ನು ಪರಿಗಣಿಸಿ ಎಂದು ಜಿಲ್ಲಾ ಉಸ್ತುವಾರಿ  ಸಚಿವ ಟಿ.ಬಿ. ಜಯಚಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಅವರು ತಾಪಂ ಸಭಾಂಗಣದಲ್ಲಿ ನಡೆಯುತ್ತಿದ್ದ ಸಾಮಾನ್ಯ ಸಭೆಗೆ ಅನಿರೀಕ್ಷಿತವಾಗಿ ಆಗಮಿಸಿದಾಗ ಕುಡಿಯುವ ನೀರಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಅಧಿಕಾರಿಗಳು ಕುಡಿಯುವ ನೀರಿನ ಯೋಜನೆಗಳಿಗೆ ಯಾವುದೇ ಸಬೂಬು ಹೇಳದೆ ಕ್ರಿಯಾಯೋಜನೆ ತಯಾರಿಸಿ, ಅದಕ್ಕಾಗಿ ಎಷ್ಟು ಬೇಕಾದರೂ ಅನುದಾನ ನೀಡಲು ನಮ್ಮ ಸರ್ಕಾರ ಸಿದ್ಧವಿದೆ. ಈಗಾಗಲೇ ಈ ನಿಟ್ಟಿನಲ್ಲಿ 40 ಲಕ್ಷ ರು. ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.
ನಿರ್ಬಂಧವಿಲ್ಲ: ಈಗಾಗಲೇ ಕೊರೆದಿರುವ ಕೊಳವೆ ಬಾವಿಗಳನ್ನು ಅಳಪಡಿಸುವುದು, ವಿಫಲವಾಗಿರುವ ಕಡೆ ಹೊಸ ಕೊಳವೆ ಬಾವಿ ಕೊರೆಯಲು ಯಾವುದೇ ನಿರ್ಬಂಧವಿಲ್ಲ. ಈ ಬಗ್ಗೆ ಮಾಡುವ ವೆಚ್ಚಕ್ಕೆ ಯಾವುದೇ  ಮಿತಿಯಿಲ್ಲ.
ಇದಕ್ಕಾಗಿ ಕೇಂದ್ರಸರ್ಕಾರ 1800 ಕೋಟಿ  ಅನುದಾನ ಬಿಡುಗಡೆಯಾಗಿದೆ. ನಮ್ಮ ಜಿಲ್ಲೆ ಕಪ್ಪು  ಪ್ರದೇಶವಾಗಿರುವುದರಿಂದ ಮೇ ಕಳೆದರೂ ಮಳೆ  ಆಶಾದಾಯಕವಾಗಿಲ್ಲ. ಜೂನ್, ಜುಲೈನಲ್ಲಿ ಮಳೆಬರುವ ನಿರೀಕ್ಷೆ ಕಡಿಮೆಯಾಗಿದೆ. ಆದ್ದರಿಂದ ಕೆರೆಗಳ ನೀರಿನ ಮೂಲವನ್ನು ಗುರಿಯಾಗಿರಿಸಿಕೊಂಡು ಯೋಜನೆ ರೂಪಿಸಿ ಎಂದರು.
ಅವೈಜ್ಞಾನಿಕ: ತಾಲೂಕಿನಲ್ಲಿ ಎನ್ಆರ್ಇಜಿ ಯೋಜನೆಯಲ್ಲಿ ಕೈಗೊಂಡರುವ ಕಾಮಗಾರಿಗಳ ಬಗ್ಗೆ ಸಾಮಾಜಿಕ ಲೆಕ್ಕಪರಿಶೋಧಕರ ತಂಡ ಸಲ್ಲಿಸಿರುವ ವರದಿ ಅವೈಜ್ಞಾನಿಕವಾಗಿದೆ. ಇದರಿಂದ ತಾಲೂಕಿನಲ್ಲಿ ಸಾವಿರಾರು ಜನ ಕೂಲಿಕಾರ್ಮಿಕರಿಗೆ ಅನಾಯ್ಯವಾಗಿದೆ. ಕಾಮಗಾರಿಗಳು ಗುಣಮಟ್ಟದಲ್ಲಿದ್ದರೂ ಲಂಚ ನೀಡಲಿಲ್ಲವೆಂಬ ಕಾರಣಕ್ಕೆ ವರದಿಯನ್ನು ತಿರುಚಿ ಸಲ್ಲಿಸಿದ್ದಾರೆ.
ಈಗಾಗಲೇ ಕಳೆದ ಸಾಲಿನ ಹಣ 5 ಕೋಟಿ ಹಣ ಬರಬೇಕಾಗಿದ್ದು, ಮಾರ್ಚ್ ನಂತರದ ಅಡ್ವಾನ್ಸ್ ಕೂಲಿ ಹಣ 10 ಕೋಟಿಯಷ್ಟು ಬರಬೇಕಾಗಿದೆ ಎಂದು ತಾಪಂ ಸದಸ್ಯರಾದ ಎ.ಬಿ. ರಮೇಶ್, ಶಶಿಧರ್, ನಿರಂಜನ್ ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಈ ಬಗ್ಗೆ ಸಚಿವರ ಸಹಕಾರದಿಂದ ಕೇಂದ್ರದ ಅನುದಾನವನ್ನು ತರುವ ಬಗ್ಗೆ ಪ್ರಯತ್ನಿಸಲಾಗುವುದು. ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಗಮನ ಸೆಳೆದಾಗ, ಸಚಿವರು ವೈದ್ಯರನ್ನು ನಾವು ಗದರಿದರೆ, ಕರ್ತವ್ಯಕ್ಕೆ ಗೈರುಹಾಜರಾಗುತ್ತಾರೆ. ಆದ್ದರಿಂದ ಇರುವ ಸಿಬ್ಬಂದಿಗಳ ಕೈಲಿ ಕೆಲಸ ಮಾಡಿಸಬೇಕಾಗಿದೆ. ಇವರಿಗೆ ಹೇಳೋರು ಕೇಳೋರು ಯಾರು ಇಲ್ಲ, ಕೆಲಸ ಮಾಡಲು ಇವರಿಗೇನು ರೋಗ ಎಂದು  ಬೇಸರಿಸಿಕೊಂಡರು.
ಸಭೆಯಲ್ಲಿ ತಾಪಂ ಅಧ್ಯಕ್ಷ ಕೆಂಕೆರೆ ನವೀನ್, ಸ್ಥಾಯಿಸಮಿತಿ ಅಧ್ಯಕ್ಷ ವಸಂತಕುಮಾರ್, ಮಾಜಿ ಅಧ್ಯಕ್ಷರುಗಳಾದ ಎಂ.ಎಂ.ಜಗದೀಶ್, ಎಚ್.ಆರ್. ಶಶಿಧರ್, ಸೀತಾರಾಮಯ್ಯ, ನಿರಂಜನ್, ಇಓ ಕೃಷ್ಣಾನಾಯಕ್ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement