ಉತ್ತರ ಕನ್ನಡ

ಅನಧಿಕೃತ ಇಟ್ಟಿಗೆ ಭಟ್ಟಿ ಮೇಲೆ ದಾಳಿ

ಮುಂಡಗೋಡ:  ತಾಲೂಕಿನ ವಿವಿಧೆಡೆ ಅನಧಿಕೃತ ಇಟ್ಟಿಗೆ ತಯಾರಿಕೆ ಭಟ್ಟಿಗಳ ಮೇಲೆ ಬುಧವಾರ ತಹಸೀಲ್ದಾರ್ ಬಿ.ಆರ್. ಪಾಟೀಲ ದಾಳಿ ನಡೆಸಿ, ಇಟ್ಟಿಗೆ ತಯಾರಿಸುವ ಸಾಚಾಗಳನ್ನು ವಶಕ್ಕೆ ತೆಗೆದುಕೊಂಡು ತಕ್ಷಣದಿಂದ ಕೆಲಸ ಸ್ಥಗಿತಗೊಳಿಸುವಂತೆ ಸೂಚಿಸಿದರು.
ತಾಲೂಕಿನ ಸನವಳ್ಳಿ, ಕುಂದರ್ಗಿ ಭಾಗದ ಇಟ್ಟಿಗೆ ಭಟ್ಟಿಗಳ ಮೇಲೆ ದಾಳಿ ನಡೆಸಿದ ತಹಸೀಲ್ದಾರ್, ಕೃಷಿ ಭೂಮಿಯಲ್ಲಿ ಪ್ರಾರಂಭಿಸಲಾಗಿರುವ ಇಟ್ಟಿಗೆ ಗಣಿಗಾರಿಕೆಯನ್ನು ತಕ್ಷಣದಿಂದ ನಿಲ್ಲಿಸದಿದ್ದರೆ ಕಾನೂನು ಪ್ರಕಾರ ಗದ್ದೆಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೃಷಿ ಉಪಯೋಗಕ್ಕೆ ನೀಡಲಾಗಿರುವ ಬೋರ್‌ವೆಲ್ ಹಾಗೂ ಕೆರೆಗಳ ನೀರನ್ನು ಇಟ್ಟಿಗೆ ತಯಾರಿಕೆಗಾಗಿ ಬಳಸುತ್ತಿರುವುದನ್ನು ಗಮನಿಸಿ ತಹಸೀಲ್ದಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲಲ್ಲಿ ವಿದ್ಯುತ್ ಕಂಬಗಳಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲಾಗಿತ್ತು. ಹಸಿ ಗಿಡಗಳ ಮೇಲೆ ಬೋರ್ಡ್ ಅಳವಡಿಸಿ ವಿದ್ಯುತ್ ಸಂಪರ್ಕ ಪಡೆಯಲಾಗಿತ್ತು. ಇಟ್ಟಿಗೆ ತಯಾರಿಸಲು ಬೋರ್‌ವೆಲ್‌ಗಳಿಂದ ಅಕ್ರಮವಾಗಿ ನೀರು ಪೂರೈಸುತ್ತಿರುವ ಗದ್ದೆಯ ಮಾಲಿಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು. ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಇಟ್ಟಿಗೆ ತಯಾರಿಕೆ ಭಟ್ಟಿಗಳನ್ನು ಗುರುತಿಸಿ ತಕ್ಷಣ ಅವರಿಗೆ ನೋಟಿಸ್ ಜಾರಿ ಮಾಡಿ ತಮಗೆ ವರದಿ ನೀಡುವಂತೆ ಸ್ಥಳದಲ್ಲಿದ್ದ ಕಂದಾಯ ನಿರೀಕ್ಷಕ ಚಿದಾನಂದ ಶೇರಖಾನೆ ಅವರಿಗೆ ಸೂಚಿಸಿದರು. ಈ ವೇಳೆಯಲ್ಲಿ ಸುಮಾರು 10ಕ್ಕೂ ಅಧಿಕ ಇಟ್ಟಿಗೆ ತಯಾರಿಕೆ ಸಾಚಾಗಳನ್ನು ವಶ ಪಡಿಸಿಕೊಂಡು ಅನಧಿಕೃತ ಇಟ್ಟಿಗೆ ತಯಾರಿಕೆ ಸ್ಥಗಿತಗೊಳಿಸುವಂತೆ ಎಚ್ಚರಿಕೆ ನೀಡಿದರು. ಫೆ. 4ರಂದು ಅಕ್ರಮ ಇಟ್ಟಿಗೆ ತಯಾರಿಕೆ ಭಟ್ಟಿಗಳು ಮುಂಡಗೋಡ ತಾಲೂಕಿನ ವಿವಿಧೆಡೆ ತಲೆ ಎತ್ತಿರುವ ಕುರಿತು ಕನ್ನಡಪ್ರಭ ವರದಿ ಮಾಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ಪ್ರಮಾಣವಚನ ಸ್ವೀಕಾರ

ಸರ್ಕಾರದಿಂದ ಉತ್ತರ ಕೇಳುವುದು ಅರಾಜಕತೆಯಲ್ಲ: ಜೈಲಿಗೂ ಹೋಗಲು ಸಿದ್ಧ; CJP ತಿರಂಗಾ ಮೆರವಣಿಗೆಗೂ ಮುನ್ನ ಅಭಿಜೀತ್ ದೀಪ್ಕೆ!

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು