ಉತ್ತರ ಕನ್ನಡ

ನಾಳೆ ವಿದ್ಯುತ್ ವ್ಯತ್ಯಯ

ಯಲ್ಲಾಪುರ:  ಫೆ. 13ರಂದು ಕಿರವತ್ತಿ 110/33/11 ಕೆ.ವಿ. ವಿದ್ಯುತ್ ಉಪಕೇಂದ್ರದ ನಿರ್ವಹಣಾ ಕಾರ್ಯ ಕೈಗೊಳ್ಳಲಿರುವುದರಿಂದ ಕಿರವತ್ತಿ 110/33/11 ಕೆ.ವಿ. ವಿದ್ಯುತ್ ಉಪ-ಕೇಂದ್ರದಿಂದ ಹೊರಡುವ 11 ಕೆ.ವಿ. ಹುಣಸಗೇರಿ, ಮದನೂರು, ಸೋಮಾಪುರ, ಹೊಸಳ್ಳಿ, ಕಿರವತ್ತಿ, ಮತ್ತು ಶ್ರೀಕೃಷ್ಣ ಮಿಲ್ಕ್ ಡೈರಿ ಫೀಡರ್‌ಗಳಿಗೆ ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಕಿರವತ್ತಿ ಹೆಸ್ಕಾಂ ಸಹಾಯಕ ಅಭಿಯಂತರರು ಕೋರಿದ್ದಾರೆ.
ನಾಳೆ ವಿದ್ಯುತ್ ನಿಲುಗಡೆ
ಕುಮಟಾ:  ತಾಲೂಕಿನ 110 ಕೆವಿ ವಿದ್ಯುತ್ ಗ್ರಿಡ್‌ನಲ್ಲಿ ಸ್ಟ್ರಕ್ಚರ್ ಪೇಟಿಂಗ್ ಮತ್ತು ಬ್ರೇಕರ್ ಓವರ್ ಹೌವ್ಲಿಂಗ್ ನಿರ್ವಹಣಾ ಕಾರ್ಯ ಕೈಗೊಳ್ಳುವುದರಿಂದ ಕುಮಟಾ, ಹೊನ್ನಾವರ ಮ್ತತು ಭಟ್ಕಳ ತಾಲೂಕಿನಾದ್ಯಂತ ಫೆ. 13ರ ಬೆಳಗ್ಗೆ 9ರಿಂದ ಸಂಜೆ 5.30ರ ವರೆಗೆ ವಿದ್ಯುತ್ ನಿಲುಗಡೆಗೊಳಿಸಲಾಗುವುದು. ಸಾರ್ವಜನಿಕರು, ಗ್ರಾಹಕರು ಸಹಕರಿಸಬೇಕಾಗಿ ಕುಮಟಾ ಗ್ರಿಡ್‌ನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿ.ಜೆ. ಹೆಗಡೆ ತಿಳಿಸಿದ್ದಾರೆ. ಇದೇ ಅವಧಿಯಲ್ಲಿ ಕುಮಟಾ ಮೂರುಕಟ್ಟೆ ಹತ್ತಿರ ನಗರ ಫೀಡರ್‌ನಲ್ಲಿ ವಾಹಕ ಬದಲಾವಣೆ ಕಾರ್ಯವನ್ನು ಆಯೋಜಿಸಿಕೊಂಡಿರುವುದಾಗಿ ಕುಮಟಾ ಹೆಸ್ಕಾಂನವರು ತಿಳಿಸಿದ್ದಾರೆ.
ಮನೆಗೆ ಬೆಂಕಿ: ಹಾನಿ
ಶಿರಸಿ:  ತಾಲೂಕಿನ ಜಡ್ಡಿಗದ್ದೆಯ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಆಸ್ತಿ, ಒಡವೆಗಳು ಹಾನಿಗೊಳಗಾಗಿದೆ. ಶನಿವಾರ ಸಂಜೆ ವೇಳೆ ಜಡ್ಡಿಗದ್ದೆಯ ವೆಂಕಟ್ರಮಣ ಕೃಷ್ಣಾ ಪೂಜಾರಿ ಮನೆಯಲ್ಲಿಲ್ಲದ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಗ್ನಿ ಆಕಸ್ಮಿಕದ ಪರಿಣಾಮ ಮನೆಯಲ್ಲಿದ್ದ ಹಣ, ವಸ್ತ್ರ, ಒಡವೆಗಳು ಸುಟ್ಟು ಕರಕಲಾಗಿದ್ದು ಅಂದಾಜು ರು. 1.70 ಲಕ್ಷಗೂ ಹೆಚ್ಚು ಹಾನಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೂಲಿಯೇ ಜೀವನಾಧಾರವಾಗಿರುವ ಈ ಬಡಕುಟುಂಬ ಅಗ್ನಿ ಅವಘಡದಿಂದಾಗಿ ಆಘಾತಗೊಂಡಿದೆ. ಘಟನೆಯಲ್ಲಿ ಒಂದು ಬಂಗಾರದ ಸರ, ನಾಲ್ಕು ಉಂಗುರಗಳು ಸಂಪೂರ್ಣ ಸುಟ್ಟು  ಕರಕಲಾಗಿವೆ. ಆಕಳನ್ನು ಮಾರಿ ಮನೆಯಲ್ಲಿ ಇಟ್ಟಿದ್ದ ಹಣ, ಸ್ವ ಸಹಾಯ ಸಂಘಕ್ಕೆ ತುಂಬಲು ತಂದಿಟ್ಟ ಹಣ ಸೇರಿದಂತೆ ಮನೆಯಲ್ಲಿದ್ದ ರು. 40 ಸಾವಿರಗೂ ಹೆಚ್ಚಿನ ನಗದು ಹಣ ಭಸ್ಮವಾಗಿದೆ. ಬಟ್ಟೆ ಬರೆ, ಮಕ್ಕಳ ಶಾಲೆಯ ಪುಸ್ತಕಗಳು ಅಗ್ನಿಗೆ ಆಹುತಿಯಾಗಿವೆ. ಘಟನೆ ನಡೆದ ಸ್ಥಳಕ್ಕೆ ಸೋಮವಾರ ತಾಪಂ ಅಧ್ಯಕ್ಷ ಗುರುಪಾದ ಹೆಗಡೆ ಬೊಮ್ನಳ್ಳಿ, ಉಪಾಧ್ಯಕ್ಷ ಸಂತೋಷ ಗೌಡರ್, ಜಿಪಂ ಸದಸ್ಯೆ ಶೋಭಾ ನಾಯ್ಕ ಭೇಟಿ ನೀಡಿ ತಾಪಂನಿಂದ ಸಾಧ್ಯವಿರುವ ಎಲ್ಲ ನೆರವನ್ನೂ ನೀಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ವಿವಾದ: ಚುನಾವಣಾ ಆಯೋಗ, ಜ್ಞಾನೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್ ನೋಟಿಸ್; ರಾಹುಲ್ ಗಾಂಧಿಗೂ ತರಾಟೆ

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಸ್ಟಿಂಗ್‌ ಆಪರೇಷನ್‌ ರೂವಾರಿ, ರೌಡಿಶೀಟರ್‌ ಫೋಟೋ ರಿಲೀಸ್‌ ಮಾಡಿದ ಕುಮಾರಸ್ವಾಮಿ!

ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಪ್ರಿಯಕರ? ಮನೆ ಮುಂದೆ ಯುವತಿ ಪ್ರತಿಭಟನೆ!-Video

'ಮೋದಿ ವಿರೋಧಿ ಪ್ರತಿಭಟನೆಗಳಿಗೆ ಅಮೆರಿಕನ್ನರ ಆರ್ಥಿಕ ನೆರವು?'; Mary Millben ಸ್ಫೋಟಕ ಆರೋಪ!